ಶಿರಾಡಿ: ಮಹಿಳೆ ಮೃತ್ಯು

0

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಕೆ.ಪ್ರಕಾಶ ಎಂಬವರ ಪತ್ನಿ ಓಮನ(53ವ.) ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಓಮನ ಅವರು ತಾಯಿ ಮನೆಗೆ ಹೋಗಿ ಮರುದಿನ ಬರುವುದಾಗಿ ತಿಳಿಸಿ ಸೆ.7ರಂದು ಮನೆಯಿಂದ ಹೋಗಿದ್ದರು. ಸೆ.8ರಂದು ಸಂಜೆಯಾದರೂ ಓಮನ ಅವರು ಮನೆಗೆ ವಾಪಾಸು ಬಾರದೇ ಇದ್ದ ಕಾರಣ ಅವರ ತಾಯಿ ಮನೆಗೆ ಫೋನ್ ಮಾಡಿ ವಿಚಾರಿಸಿದಾಗ, ಓಮನ ಅಲ್ಲಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ಪ್ರಕಾಶ, ಮಗ ಮತ್ತು ನೆರೆಕರೆಯವರು ಹುಡುಕಾಡಿದಾಗ ಓಮನರವರು ಅವರ ಹಳೆ ಮನೆಯಲ್ಲಿ ಬಿದ್ದುಕೊಂಡಿದ್ದು, ಮೃತಪಟ್ಟಿರುವುದು ಕಂಡು ಬಂದಿದೆ. ಓಮನ ಅವರು ಸೆ.7ರ ಬೆಳಿಗ್ಗೆ 10 ಗಂಟೆಯಿಂದ ಸೆ.8ರ ರಾತ್ರಿ 10 ಗಂಟೆಯ ಮಧ್ಯದಲ್ಲಿ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮೃತ ಮಹಿಳೆಯ ಪತಿ ಕೆ.ಪ್ರಕಾಶ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here