ಕನಿಷ್ಠ 5 ಸಾವಿರ ಬೆಲೆಯ ಖರೀದಿಗೆ ಬೆಳ್ಳಿ ದೀಪ ಉಚಿತ…! ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲರ್ಸ್ ನಲ್ಲಿ ದೀಪಾವಳಿ ಕೊಡುಗೆ

0

ಪುತ್ತೂರು : ದೀಪಾವಳಿಯ ಸಡಗರ, ಸಂಭ್ರಮಾಚರಣೆ ಹಾಗೂ ಧನಲಕ್ಷ್ಮೀ ಪೂಜೆಯ ಸಲುವಾಗಿ ಪ್ರತಿ 5 ಸಾವಿರ ಬೆಲೆಯ ಆಭರಣಗಳ ಖರೀದಿಯಲ್ಲಿ ಒಂದು ಚೆಂದದ ಬೆಳ್ಳಿ ದೀಪ ಉಚಿತವಾಗಿ ಸಿಗಲಿದ್ದು, ಅದರ ಜೊತೆಗೆ ಆಭರಣಗಳ ತಯಾರಿ ವೆಚ್ಚದಲ್ಲೂ ಕೂಡ ಗ್ರಾಹಕರಿಗೆ 25% ಕಡಿತ. ಈ ಮೂಲಕ ಗ್ರಾಹಕರಿಗೆ ಭರ್ಜರಿ ಉಳಿತಾಯ ಕೊಡುಗೆ ಕೋರ್ಟುರೋಡ್ ಮುಖ್ಯರಸ್ತೆಯ ಅನಂತ ಗಣೇಶ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲರ್ಸ್ ನಲ್ಲಿ ಅ.24 ರಿಂದ ಅ.29 ರವರೆಗೆ ಲಭಿಸಲಿದೆ.

ಅ.24 ರಂದು ಬೆಳಗ್ಗೆ ಮಳಿಗೆಯಲ್ಲಿ ಪುರೋಹಿತ ರತ್ನಾಕರ್ ಭಟ್ ಧನಲಕ್ಷೀ ಪೂಜಾ ಕಾರ್ಯಕ್ರಮ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು.

ಮಾಲಕ ಶಿವಾಜಿ ಮಾರುತಿ ಸುರ್ವೆ, ಸುನೀತಾ ಶಿವಾಜಿ ಸುರ್ವೆ ದಂಪತಿ ಮತ್ತು ಮಕ್ಕಳಾದ ದುರ್ಗಾ ಶಿವಾಜಿ ಸುರ್ವೆ, ಲಕ್ಷ್ಮೀ ಶಿವಾಜಿ ಸುರ್ವೆ, ಶೌರ್ಯ ಶಿವಾಜಿ ಸುರ್ವೆ ಹಾಗೂ ಸಿಬಂದಿಗಳಾದ ವಿಕಾಶ್ ಹಾಗೂ ಪ್ರಕಾಶ್ ಹಾಜರಿದ್ದರು. ಮಾಲಕ ಶಿವಾಜಿ ಸುರ್ವೆ ಮಾತನಾಡಿ, ಬೆಳಕಿನ ಹಬ್ಬಕ್ಕೆ ಸಂಸ್ಥೆಯು ಆಭರಣ ಪ್ರಿಯರಿಗಾಗಿ ಅಚ್ಚರಿ ಕೊಡುಗೆಗಳನ್ನು ಘೋಷಣೆ ಮಾಡಿದ್ದು, ನಿರ್ದಿಷ್ಠ ಮೊತ್ತದ ಆಭರಣ ಖರೀದಿಗೆ ಒಂದು ಬೆಳ್ಳಿ ದೀಪ, ಮೇಕಿಂಗ್ ಚಾರ್ಜ್ ಮೇಲೆ ಸುಮಾರು 25 ಪರ್ಸೆಂಟ್ ವಿಶೇಷ ರಿಯಾಯಿತಿಯಿದ್ದು, ಕೊಡುಗೆಯು ಅ.29 ರ ತನಕ ಇದ್ದು, ಗ್ರಾಹಕರು ಈ ಕೊಡುಗೆಯ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here