ಪುತ್ತೂರು: ಭ್ರಷ್ಟಾಚಾರ ರಹಿತವಾಗಿ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾಗೇಶ್ ಕೆಯವರನ್ನು ಅ.24ರಂದು ಪಡೀಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಾಗೇಶ್ರವರು ಮಾತನಾಡಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದು ಸರಕಾರಿ ಸೇವೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ತಂದೆಯವರು ಸೂಚಿಸಿದ್ದು, ನಾನು ತಂದೆಯ ಮಾತನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ಜನರಿಗೆ ಉತ್ತಮ ಸೇವೆ ನೀಡಿದ್ದೇನೆ. ನನ್ನನ್ನು ಗುರುತಿಸಿ ಅಭಿಮಾನದಿಂದ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಿರ್ದೇಶಕಿ ಶಯನಾ ಜಯಾನಂದ ದಕ್ಷ ಹಾಗೂ ಪ್ರಾಮಾಣಿಕವಾಗಿ ನಾಗೇಶ್ರವರು ನೀಡಿರುವ ಸೇವೆಯನ್ನು ಜನ ಸದಾ ಗುರುತಿಸಿದ್ದಾರೆ. ಮೂರ್ತೇದಾರರ ಸಹಕಾರಿ ಸಂಘದ ಬೆಳವಣಿಗೆಯಲ್ಲಿಯೂ ನಾಗೇಶ್ರವರ ಕೊಡುಗೆಯಿದೆ ಎಂದರು.
ಚಂದಪ್ಪ ಪೂಜಾರಿ ಕಾಡ್ಲ ಮಾತನಾಡಿ, ಪ್ರಾಮಾಣಿಕ ಸೇವೆ ನಾಗೇಶ್ರವರ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ಉಪಾಧ್ಯಕ್ಷ ಬಿ.ಕೆ ಆನಂದ ಸುವರ್ಣ, ನಿರ್ದೇಶಕರಾದ ಜಿನ್ನಪ್ಪ ಪೂಜಾರಿ ಮುರ, ವೀರಪ್ಪ ಪೂಜಾರಿ ಡೆಕ್ಕಾಜೆ, ಪದ್ಮಪ್ಪ ಪೂಜಾರಿ, ಉಮೇಶ್ ಪೂಜಾರಿ, ಸಿಬಂದಿಗಳಾದ ಸವಿತಾ ಎಂ. ಆದರ್ಶ, ಪಿಗ್ಮಿ ಸಂಗ್ರಾಹಕರಾದ ಭಾಸ್ಕರ, ಶಿವಪ್ರಸಾದ್, ದಿನೇಶ್, ಗಣೇಶ್ ಹಾಗೂ ಸತೀಶ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಧಾಕೃಷ್ಣ ಎ. ಸನ್ಮಾನಿತರ ಪರಿಚಯ ಮಾಡಿದರು. ನಿರ್ದೇಶಕ ಗೋಪಾಲಕೃಷ್ಣ ಸುವರ್ಣ ವಂದಿಸಿದರು.
ಲಕ್ಷ್ಮೀಪೂಜೆ:
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.