ಪುತ್ತೂರು: ಮಂಗಳೂರಿನಲ್ಲಿ ನ.29ರಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಚಾಂಪಿಯನ್ ಟ್ರೋಫಿ 2022 ಅಂಗವಾರಿ ಅ.23ರಂದು ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ 14ರ,16ರ, 18ರ ವಯೋಮಾನದ ಬಾಲಕ ಬಾಲಕಿಯರಿಗೆ ಆಯ್ಕೆ ಟ್ರಯಲ್ಸ್ ಮತ್ತು ತರಬೇತಿ ಶಿಬಿರ ನಡೆಯಿತು.
ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರು ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುತ್ತೂರು ವಲಯದ 100ಕ್ಕೂ ಮಿಕ್ಕಿ ಕ್ರೀಡಾಪಟುಗಳು ಈ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸಿದ್ದರು. ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಕಾಂತ್ ಸ್ವಾಗತಿಸಿದರು. ವಾಲಿಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ಶಿವರಾಮ್ ಭಟ್ ಬೀರ್ನಕಜೆ, ವಾಲಿಬಾಲ್ ತೀರ್ಪುಗಾರ ಬೋರ್ಡ್ನ ಮುಖ್ಯಸ್ಥ ಮೋನಪ್ಪ ಪಟ್ಟೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ, ಬೆಟ್ಟಂಪಾಡಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪೊಡಿಯ, ಪ್ರವೀಣ ರೈ ಪಾಪೆಮಜಲು, ವನಿತಾ ಮುಂಡೂರು, ನವೀನ್ ಅಂಬಿಕ ವಿದ್ಯಾಸಂಸ್ಥೆ, ಗಣೇಶ್ ರೈ ಮುಂಡಾಸು ಅನೂಪ್ ಕುಮಾರ್, ವಿಜೇತ್, ಶರತ್, ರಫೀಕ್ ಅತೂರು, ನಂದಕುಮಾರ್, ಪೂರ್ಣಿಮಾ ವಿಕ್ಟರ್ಸ್ ಬಾಲಿಕ ಪ್ರೌಢಶಾಲೆ, ಸುದೀಕ್ಷ ಸಾಂದೀಪನಿ ನರಿಮೊಗರು ಆಯ್ಕೆ ಟ್ರಯಲ್ಸ್ ನಲ್ಲಿ ಸಹಕರಿಸಿದರು.
Home ಕ್ರೀಡೆ ನ್ಯೂಸ್ ಮಂಗಳೂರಿನಲ್ಲಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಟ್ರೋಫಿ -ಸುದಾನ ಶಾಲೆಯಲ್ಲಿ ಸ್ಪರ್ಧಿಗಳ ಆಯ್ಕೆ, ತರಬೇತಿ ಶಿಬಿರ