ಯೋಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರರ್ಭುಮತಃ |
ಸಹಸ್ರ ನಯನಃ ಶಕ್ರೋ ಗ್ರಹ ಪೀಡಾಂ ವ್ಯಪೋಹತು ||
ಅ.25 ಮಂಗಳವಾರ ಭಾರತದಲ್ಲಿ ಗ್ರಸ್ತಾಸ್ತವಾಗಿ ಗೋಚರಿಸುವುದು. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಹಣ ಸಂಭವಿಸುವುದು. ಈ ನಕ್ಷತ್ರ ರಾಶಿಯವರಿಗೂ ವೃಶ್ಚಿಕ, ವೃಷಭ, ಮೀನ ರಾಶಿಯವರಿಗೂ ಅರಿಷ್ಟವಿದೆ. ಗ್ರಸ್ತಾಸ್ತಗ್ರಹಣವಾದ್ದರಿಂದ ಹಗಲು, ರಾತ್ರಿ ಭೋಜನ ನಿಷೇಧವಿದೆ. ಅಶಕ್ತರು, ಮಕ್ಕಳು, ವೃದ್ಧರು ಮಧ್ಯಾಹ್ನ 1 ಗಂಟೆಯವರೆಗೆ ಆಹಾರ ಸೇವೆನೆ ಮಾಡಬಹುದು.
ಗ್ರಹಣ ಸ್ಪರ್ಶಕಾಲ 5-09
ಮಧ್ಯಕಾಲ 5-48
ಮೋಕ್ಷ ಕಾಲ 6-29
ಈ ಗ್ರಹಣ ಕಾಲದಲ್ಲಿ ಯೆಥಾ ಶಕ್ತಿ ಆದಿತ್ಯ ಜಪ, ಕೇತು ಜಪ, | ಆದಿತ್ಯಾಯ ನಮ:| ಕೇತುವೇ ನಮಃ| ಎಂದು 108 ಸಲ ಮಾಡಬೇಕು. ಸಿದ್ಧಿ ಮಂತ್ರ ಜಪ, ಪಾರಾಯಣಾದಿಗಳನ್ನು ಮಾಡಬೇಕು. ಗ್ರಹಣದ ಆಚರಣೆ – ಗ್ರಹಣ ಸ್ಪರ್ಶದ ಮೊದಲು ಸ್ನಾನ, ನಂತರ ಜಪ, ಹೋಮ, ದಾನ ಪುನಃ ಸ್ನಾನ ಮಾಡಬೇಕು. ಸ್ತ್ರೀಯರು ಕಂಠದವರೆಗೆ ಸ್ನಾನ ಮಾಡಬೇಕು. ಗ್ರಹಣ ಮೋಕ್ಷಾ ನಂತರ ತಲೆಗೆ ಸ್ನಾನ ಮಾಡಬೇಕು. ಎಣ್ಣೆಯಲ್ಲಿ ಬೇಯಿಸಿದ ಪದಾರ್ಥಗಳು, ಅನ್ನ, ಇತ್ಯಾದಿಗಳು ಅಶುದ್ಧ. ಹಾಲು, ಮೊಸರು, ತುಪ್ಪ, ಇತ್ಯಾದಿ ಪದಾರ್ಥಗಳ ಮೇಲೆ ತುಳಸಿ, ದರ್ಬೆ ಇಡಬೇಕು. ಲಯಕರ್ತನಾದ ಶಿವನ ಸನಿಧಾನದಲ್ಲಿ ನಡೆಯುವ ಗ್ರಹಣ ಶಾಂತಿ ಹೋಮದಲ್ಲಿ ಆಯಾಯ ನಕ್ಷತ್ರದವರು ಶಾಂತಿ ಹೋಮ ಮಾಡಿಸುವುದರಿಂದ ಗ್ರಹಣ ದೋಷ, ಅನಾರೋಗ್ಯ, ಕಂಟಕ, ಆಪತ್ತು, ಖಾಯಿಲೆಗಳು ಪರಿಹಾರವಾಗುವುದು. ಲೋಕಕ್ಕೆ ಬರುವ ಎಲ್ಲಾ ಮಹಾಮಾರಿ ಹಂದಿಜ್ವರ, ಕೊರೋನಾ, ಡೆಂಗ್ಯು ಜ್ವರ ಇತ್ಯಾದಿ ಖಾಯಿಲೆಗಳು ದೂರೀಕೃತವಾಗುತ್ತದೆ.
ನಕ್ಷತ್ರಗಳು: ಚಿತ್ರಾ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ, ಕೃತಿಕ, ರೋಹಿಣಿ, ಮೃಗಶಿರ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ ಇಷ್ಟು ನಕ್ಷತ್ರದವರಿಗೆ ವಿಶೇಷ ಹಾನಿಕಾರಕವಾದ್ದರಿಂದ ಶಾಂತಿ ಹೋಮ ಅಗತ್ಯ.
ಸರ್ವೆಜನಾ: ಸುಖಿನೋ ಭವಂತು.
–ನಳಿನಿಸುತಾ ಕೆದಿಲಾಯ