ವಿದ್ಯಾಮಾತಾ- ಉದ್ಯೋಗದಾತ.. ಐದು ವರ್ಷಗಳ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟ ಪುತ್ತೂರಿನ ಹೆಮ್ಮೆಯ ಸಂಸ್ಥೆ

0

ಪುತ್ತೂರು: ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಖಾಸಗಿ ಉದ್ಯೋಗ ಕೌಶಲ್ಯ, ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ತರಬೇತಿ, ದೈಹಿಕ ಸದೃಡತೆ ಮೈದಾನ ತರಬೇತಿ ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ಕೊಡುವ ಕರಾವಳಿಯ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ- ವಿದ್ಯಾಮಾತಾ.

ಕರಾವಳಿ ಭಾಗದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯಿದ್ದರೂ, ಉದ್ಯೋಗ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಮಾಹಿತಿಯ ಕೊರತೆಯನ್ನು ನೀಗಿಸಿ ಸರಕಾರಿ ಮತ್ತು ಖಾಸಗಿ ರಂಗಗಳ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆಯಲು ಸಹಕಾರಿಯಾಗುವ ಗುರಿಯೊಂದಿಗೆ ಸ್ಥಾಪಿತವಾದ ಶಿಕ್ಷಣ ಸಂಸ್ಥೆ ವಿದ್ಯಾಮಾತಾ ಫೌಂಡೇಶನ್ ಪ್ರವರ್ತಿತ ವಿದ್ಯಾಮಾತಾ ಅಕಾಡೆಮಿ.

2017 ರಿಂದ 2 ರಾಜ್ಯಮಟ್ಟದ ಉದ್ಯೋಗ ಮೇಳಗಳನ್ನು ಪುತ್ತೂರಿನಲ್ಲಿ ಆಯೋಜಿಸುವುದರ ಮೂಲಕ ಮತ್ತು ನಿರಂತರವಾಗಿ 5 ವರ್ಷಗಳಿಂದ ಪ್ರತಿ ತಿಂಗಳು ತನ್ನ ಸಹಯೋಗದಲ್ಲಿರುವ 225 ರಷ್ಟು ವಿವಿಧ ಕ್ಷೇತ್ರದ ಖಾಸಗಿ ಕಂಪನಿಗಳಲ್ಲಿ ನೇರ ಸಂದರ್ಶನಗಳನ್ನು ಆಯೋಜಿಸುವುದರ ಮೂಲಕ ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟ ಕೀರ್ತಿ ವಿದ್ಯಾಮಾತಾ ಸಂಸ್ಥೆಯದ್ದು.

ಕಳೆದ ಎರಡು ವರ್ಷಗಳಿಂದ ವಿದ್ಯಾಮಾತಾ ಅಕಾಡೆಮಿಯ ಮೂಲಕ ಐಎಎಸ್/ಕೆ ಎ ಎಸ್/ ಪೋಲೀಸ್ ನೇಮಕಾತಿ/ ಅರಣ್ಯ/ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೇರ ಮತ್ತು ಆನ್ಲೈನ್ ತರಗತಿಗಳ ಮೂಲಕ ಅತ್ಯುತ್ತಮ ತರಬೇತಿಯನ್ನು ಕೊಡುವುದರ ಮುಖಾಂತರ 39 ವಿದ್ಯಾರ್ಥಿಗಳು ವಿವಿಧ ನೇಮಕಾತಿಗಳ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣವಾಗುವಂತೆ ಮಾಡಿದಂತಹ ಕೀರ್ತಿ ವಿದ್ಯಾಮಾತಾ ಅಕಾಡೆಮಿಯದ್ದು . ಪ್ರಸ್ತುತ ಪೊಲೀಸ್/ ಅರಣ್ಯ/ ಕೆ ಎಂ ಎಫೆ/ಬ್ಯಾಂಕಿಂಗ್ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಆಯ್ಕೆಗೊಂಡು 11 ವಿದ್ಯಾರ್ಥಿಗಳು ಪ್ರಸ್ತುತ ಆಯಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕರಾವಳಿ ಭಾಗದವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದೇ ಇಲ್ಲವೆನ್ನುವ ಕೂಗಿನ ಮಧ್ಯೆ ಕೊರೋನ ಸಂಕಷ್ಟದ ಮಧ್ಯೆಯು ವಿದ್ಯಾರ್ಥಿಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಾಗಾರಗಳ ಮೂಲಕ ಜಾಗೃತಿಯನ್ನು ಮೂಡಿಸಿ ಅತ್ಯುತ್ತಮ ತರಬೇತಿಯನ್ನು ನೀಡಿ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿಗಳ ಆಯ್ಕೆಯಾಗುವ ಮೂಲಕ ಇನ್ನಷ್ಟು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕಾರಣೀಭೂತರಾಗಿರುವುದು ನಿಜವಾಗಲೂ ಅತ್ಯಂತ ಅಭಿನಂದನೀಯವಾಗಿದೆ.” ಬಿಪಿಎಲ್/ಅಂತ್ಯೋದಯ ಕಾರ್ಡ್ ಹೊಂದಿರುವ ಮತ್ತು ಕನ್ನಡ ಮಾಧ್ಯಮ/ ಗ್ರಾಮೀಣ ವಿದ್ಯಾರ್ಥಿಗಳಿಗೆ ಗೌರವಧನವನ್ನಷ್ಟೆ ಸೇವಾ ಶುಲ್ಕವಾಗಿ ತೆಗೆದುಕೊಂಡು ವಿದ್ಯಾಮಾತಾ ಅಕಾಡಮಿಯು ತರಬೇತಿಯನ್ನು ನೀಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ/ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ/ಉಚಿತ ದೈಹಿಕ ಸದೃಢತೆ ಮೈದಾನ ತರಬೇತಿ/ ಉಚಿತವಾಗಿ ಎಲ್ಲಾ ಅರ್ಜಿಗಳನ್ನು ಸಲ್ಲಿಸುವ ಅವಕಾಶ/ ಉಚಿತ ಉದ್ಯೋಗ ಕೌಶಲ್ಯ ತರಬೇತಿಯೊಂದಿಗೆ ಅವಶ್ಯಕತೆವಿರುವವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಸದ್ಯ ಪಿ.ಯು.ಸಿ / ಪದವಿ/ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ರಾತ್ರಿ 7 ರಿಂದ 9 ರ ವರೆಗೆ ಆನ್ಲೈನ್ ತರಗತಿಗಳ ಮೂಲಕ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ” ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು ಸಂಸ್ಥೆಯ ಬಗ್ಗೆ ಮಾಹಿತಿಯನ್ನು “ಸುದ್ದಿ” ಯೊಂದಿಗೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ಕಚೇರಿ ಸಂಖ್ಯೆ: 9620468869 / 9148935808

LEAVE A REPLY

Please enter your comment!
Please enter your name here