ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಹುಟ್ಟುಹಬ್ಬ ಪ್ರಯುಕ್ತ ಸೋಮವಾರಪೇಟೆಯಲ್ಲಿ ಗುರು ಶಿಷ್ಯರ ಸಮ್ಮಿಲನ-ಸಾಧಕ ಹಿರಿಯ ವಿದ್ಯಾರ್ಥಿಗೆ ಸನ್ಮಾನ

0

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢಶಾಲೆಯ ಮುಖ್ಯ ಗುರುಗಳಾಗಿ ನಿವೃತ್ತರಾದ ಶ್ರೀನಿವಾಸ್ ಎಚ್.ಬಿ ತಮ್ಮ ಸೇವಾವಧಿಯ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವದಂದು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ, ವಿಶಿಷ್ಟ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯವನ್ನು ಆರಂಭಿಸಿ ಹಲವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿದ್ದರು. ಬಳಿಕ ತಮ್ಮ ನಿವೃತ್ತಿ ಬಳಿಕವೂ ಅದನ್ನು ಮುಂದುವರಿಸಿದ ಅವರು ತನ್ನ ಹುಟ್ಟಿದ ದಿನವನ್ನು ‘ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ ಎಂದು ಘೋಷಿಸಿಕೊಂಡು ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವ ವಿನೂತನ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

2021ರಲ್ಲಿ ತಮ್ಮ ಹುಟ್ಟು ಹಬ್ಬದಂದು ಹಿರಿಯ ವಿದ್ಯಾರ್ಥಿಗಳನ್ನು ಬಿಸಿಲೆ ಘಾಟ್‌ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಿದ್ದ ಶ್ರೀನಿವಾಸ್ ಎಚ್.ಬಿ ಅವರು ಈ ಬಾರಿ ತಮ್ಮ ಹುಟ್ಟಿದ ದಿನದಂದು ಕೊಡಗು ಜಿಲ್ಲೆಗೆ ಹಿರಿಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮಡಿಕೇರಿ ಸೋಮವಾರಪೇಟೆಯ ‘ಆಯತನ ರೆಸಾರ್ಟ್’ನಲ್ಲಿ ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳ ಸಮ್ಮುಖದಲ್ಲಿ ತಮ್ಮ 62ನೆಯ ಹುಟ್ಟುಹಬ್ಬವನ್ನು ತಮ್ಮ ಹಿರಿಯ ವಿದ್ಯಾರ್ಥಿ ಸಿಕ್ಕಿಂ ರಾಜ್ಯದ “teesta urja ltd” ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ ಆಗಿರುವ ನವೀನ್ ಕುಮಾರ್ ನೂಜಾಡಿ ಅವರನ್ನು ಸನ್ಮಾನಿಸುವ ಮೂಲಕ ಆಚರಿಸಿಕೊಂಡರು.

ಶ್ರೀನಿವಾಸ್ ಎಚ್.ಬಿ ಅವರ ಹಿರಿಯ ವಿದ್ಯಾರ್ಥಿ ನಿವೃತ್ತ ಸೈನಿಕರು, ಪ್ರಸ್ತುತ ಅಬಕಾರಿ ನಿರೀಕ್ಷಕರಾಗಿರುವ ಲೋಕೇಶ್ ಸುವರ್ಣ ಸೊರಕೆ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ್ ಭಟ್ ಕಲ್ಲಮ ಮುಖ್ಯ ಅತಿಥಿಯಾಗಿದ್ದರು.

ಈ ಸಂಧರ್ಭದಲ್ಲಿ 62ನೆಯ ಹುಟ್ಟುಹಬ್ಬವನ್ನು ಆಚರಿಸಿದ ಶ್ರೀನಿವಾಸ್ ಅವರನ್ನು ಕೂಡಾ ಗೌರವಿಸಿ ಶುಭಾಶಯ ಗೀತೆ ಹಾಡಲಾಯಿತು.

ಶಿಕ್ಷಕರಿಂದ ಸನ್ಮಾನ ಸಿಕ್ಕಿರುವುದು ಖುಷಿ ನೀಡಿದೆ-ನವೀನ್ ಕುಮಾರ್

ಸನ್ಮಾನ ಸ್ವೀಕರಿಸಿ ಮಾತನಾಡಿದ ನವೀನ್ ಕುಮಾರ್ ನೂಜಾಡಿ ಅವರು ಶ್ರೀನಿವಾಸ್ ಎಚ್.ಬಿ ಅವರ ಪ್ರೀತಿ ಆಹ್ವಾನದಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿರಳ ಅವಕಾಶ ನನ್ನ ಪಾಲಿಗೆ ಸಿಕ್ಕಿದೆ. ಹಿರಿಯ ವಿದ್ಯಾರ್ಥಿಗಳ ಸಾಧನೆಯನ್ನು ಹುಟ್ಟುಹಬ್ಬದಂದು ಸಂಭ್ರಮಿಸುವ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.

ಡಾ ಸೀತಾರಾಮ್ ಭಟ್ ಕಲ್ಲಮ ಅವರು ಕವನ ವಾಚಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರೀನಿವಾಸ್ ಎಚ್.ಬಿ ಅವರಿಗೆ ಶುಭಾಶಯ ಸಲ್ಲಿಸಿದರು. ಶ್ರೀನಿವಾಸ್ ಎಚ್.ಬಿ ಅವರು ಒಬ್ಬ ಸ್ನೇಹ ಜೀವಿ, ಜನರ ಪ್ರೀತಿ ಸಂಪಾದಿಸಿದ್ದಾರೆ ಎಂದರು.

ಹಿರಿಯ ವಿದ್ಯಾರ್ಥಿಗಳು ನನ್ನ ಜೀವನದ ಅವಿಭಾಜ್ಯ ಅಂಗ-ಶ್ರೀನಿವಾಸ್ ಎಚ್.ಬಿ

ಶ್ರೀನಿವಾಸ್ ಎಚ್ ಬಿ ಅವರು ಮಾತನಾಡಿ ನನ್ನ ಪ್ರತಿ ಹುಟ್ಟುಹಬ್ಬವನ್ನು ಹಿರಿಯ ವಿದ್ಯಾರ್ಥಿಗಳ ಜೊತೆಗೆ ಕಳೆಯಬೇಕೆಂಬುದು ನನ್ನ ಆಸೆ. ಅವರು ನನ್ನ ಜೀವನದ ಅವಿಭಾಜ್ಯ ಅಂಗ. ಅವರಿಲ್ಲದೆ ನಾನಿಲ್ಲ. ನನ್ನ 61 ನೆಯ ಹುಟ್ಟುಹಬ್ಬದ ಸಂದರ್ಭ ಲೋಕೇಶ್ ಸುವರ್ಣ ಹಾಗೂ ಅಶೋಕ್ ಎಸ್ ಡಿ ಅವರನ್ನು ಸನ್ಮಾನಿಸಿದ್ದೆ. 62 ನೆಯ ಹುಟ್ಟುಹಬ್ಬದ ಸಂಧರ್ಭದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿ ನವೀನ್ ಕುಮಾರ್ ನೂಜಾಡಿ ಅವರನ್ನು ಸನ್ಮಾನಿಸಿದ ತೃಪ್ತಿ ಸಿಕ್ಕಿದೆ. ಹಿರಿಯ ವಿದ್ಯಾರ್ಥಿಗಳು, ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ನನ್ನ ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸಿದ್ದಾರೆ ಎಂದರು.

ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ-ಲೋಕೇಶ್ ಸುವರ್ಣ

ಲೋಕೇಶ್ ಸುವರ್ಣ ಮಾತನಾಡಿ ಶ್ರೀನಿವಾಸ್ ಎಚ್ ಬಿ ಅವರ 62 ನೆಯ ಹುಟ್ಟುಹಬ್ಬದ ಆಚರಣೆಯ ಆತಿಥ್ಯ ವಹಿಸಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಶ್ರೀನಿವಾಸ್ ಎಚ್.ಬಿ ಅವರ ಪ್ರತಿ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಈ ಸಂದರ್ಭ ವಿವಿಧ ಸ್ಪರ್ಧೆಗಳನ್ನು, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸುರೇಶ್ ಎಸ್ ಡಿ ಹಾಗೂ ಜಯರಾಜ್ ಸುವರ್ಣ ಸೊರಕೆ ಅವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಗೋಪಾಲಕೃಷ್ಣ ವೀರಮಂಗಲ ಅವರು ಪ್ರಾರ್ಥನೆ ಹಾಗೂ ಶುಭಾಶಯ ಗೀತೆ ಹಾಡಿದರು. ಸುರೇಶ್ ಎಸ್ ಡಿ ಪ್ರಸ್ತಾವನೆಗೈದರು. ಕಮಲೇಶ್ ಸರ್ವೆದೋಳಗುತ್ತು ಕಾರ್ಯಕ್ರಮ ನಿರೂಪಿಸಿದರು. ಡಾ ಪ್ರವೀಣ್ ಎಸ್ ಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು.

ಕಾರ್ಯಕ್ರಮದಲ್ಲಿ ಶಶಿಧರ್ ಎಸ್.ಡಿ, ಚಂದ್ರಶೇಖರ ಬಲ್ಯಾಯ, ರಾಮಕೃಷ್ಣ ಎಸ್ ಡಿ, ಗೌತಮ್ ರಾಜ್ ಕರುಂಬಾರು, ಮನೋಜ್ ಸುವರ್ಣ ಸೊರಕೆ, ಶರೀಫ್ ಎಸ್ ಎಂ, ಕೀರ್ತನ್ ಎಸ್ ಡಿ, ಹರೀಶ್ ಆಲೇಕಿ, ಅಶೋಕ್ ಎಸ್ ಡಿ, ರಾಜೇಶ್ ಎಸ್ ಡಿ, ನಾಗೇಶ್ ಪಟ್ಟೆಮಜಲು, ಗುರುರಾಜ್ ಪಟ್ಟೆಮಜಲು, ಗೌತಮ್ ಪಟ್ಟೆಮಜಲು, ರವಿ ಎಸ್ ಡಿ, ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಕಿರಣ್ ಎಸ್ ಡಿ, ನಂದನ್ ಕೆ, ಚಿರಾಗ್ ರೈ ಎಂ, ಉಮೇಶ್ ಎಸ್ ಡಿ, ತಿಲಕ್‌ರಾಜ್ ಕರುಂಬಾರು, ಪ್ರಮೋದ್ ಅಲೇಕಿ, ಮರ್ವಿನ್, ಮಹೇಶ್, ಪ್ರವೀಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here