ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ದೀಪಾವಳಿ ಸಂಭ್ರಮ : ಹೃದಯದ ದೀಪವೂ ಬೆಳಗಲಿ – ಶ್ರೀಕೃಷ್ಣ ಉಪಾಧ್ಯಾಯ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಶ್ರೀದೇವರು ಪೂಜೆ ಸ್ವೀಕರಿಸುವ ಜೊತೆಗೆ ಧಾರ್ಮಿಕ ಶಿಕ್ಷಣ, ಭಜನೆ, ಕೋವಿಡ್ ಲಸಿಕೆ, ಆಧಾರ್ ಲಿಂಗ್ ಜೋಡಣೆಯ ಮೂಲಕ ಸದಾ ಧಾರ್ಮಿಕ ಮತ್ತು ಸಾಮಾಜಿಕ ನಿತ್ಯ ಚಟುವಟಿಕೆಯಲ್ಲಿ ಕೂಡಿರುವ ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಅ.27ರಂದು ರಾತ್ರಿ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು.
ಧಾರ್ಮಿಕ ಮುಖಂಡ ಪುರೋಹಿತ ಶ್ರೀಕೃಷ್ಣ ಉಪಾಧ್ಯಾಯ ಅವರು ಉಪನ್ಯಾಸ ನೀಡಿದರು. ನಮ್ಮ ಹೊರಗಡೆಯ ದೀಪವನ್ನು ಉರಿಸಿದ ಹಾಗೆ ನಮ್ಮ ಹೃದಯದ ದೀಪ ಬೆಳಗಬೇಕು. ಅದು ನಂದಾ ದೀಪವಾಗಿ ಬೆಳಗಬೇಕೆಂದು ಹೇಳಿದ ಅವರು ಒಂದು ದೀಪ ಇನ್ನೊಂದು ದೀಪವನ್ನು ಬೆಳಗಿಸುವ ಸಾಮಾಥ್ರ್ಯವನ್ನು ಹೊಂದಿದೆ. ಆದರೆ ಮೊದಲ ದೀಪದ ಪ್ರಭೆ ಕಡಿಮೆ ಆಗುವುದಿಲ್ಲ. ಅದೇ ರೀತಿ ಭಾರತ ಕತ್ತಲೆ ಇಲ್ಲದೆ ಬೆಳಕು ಇರುವ ದೇಶ. ಅದರ ಪೂರ್ಣ ಪ್ರಭೆ ಜಗತ್ತಿಗೆ ಸಿಗಬೇಕಾಗಿದೆ ಎಂದರು. ಹಿರಿಯರಾದ ಶ್ರೀಪತಿ ರಾವ್ ಅತಿಥಿಯಾಗಿ ಭಾಗವಹಿಸಿದ್ದರು.
ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ನೀಲಂತ್ ಬೊಳುವಾರು ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಾಗೇಶ್ ರಾವ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಟಲ್ ಉದ್ಯಾನದ ಸದಸ್ಯರಾದ ಗಣೇಶ್ ಬಾಳಿಗ, ರಾಮಚಂದ್ರ ಘಾಟೆ,ನೀಲಂತ ಕುಮಾರ್, ಪದಂ ಸಿಂಗ್ , ಸೆಂಥಿಲ್ ಕುಮಾರ್, ಶ್ರೀವಿದ್ಯಾ ರಾವ್, ಸ್ಮಿತಾ ಬಾಳಿಗ, ವಿನಯ ಬಾಳಿಗ , ಶ್ರೀಕೃಷ್ಣ ಜೆ ರಾವ್, ವೈಷ್ಣವೀ ಜೆ.ರಾವ್. ಸುನೀತಾ, ಪುಣ್ಯ, ರಾಧಾ ಘಾಟೆ, ರಜನೀ, ಪ್ರೇಮ, ಶಾಂತೇರಿ, ಮೇಧಾ, ಮನೋಹರ್ ರಾಜ ಪುರೋಹಿತ್, ಮೋಹಿನಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here