ತೆಂಕಿಲ ವಿವೇಕಾನಂದ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನ

0

ಪುತ್ತೂರು:ಕನ್ನಡ ನಾಡು ಕನ್ನಡ ನುಡಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ವತಿಯಿಂದ ಆಯೋಜಿಸಲಾದ ಕೋಟಿ ಕಂಠ ಗಾಯನ ಕಾರ್ಯಕ್ರಮ ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 28 ರಂದು ಜರಗಿತು.

ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದ ಹೊಸದಿಗಂತ ಪತ್ರಿಕೆಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್‌ ಪಿ.ಎಸ್  ಕನ್ನಡ ನಾಡು ನುಡಿಗಳ ಅವಶ್ಯಕತೆಯನ್ನು ತಿಳಿಸಿ ಶುಭಹಾರೈಸಿದರು.

ಬಳಿಕ ಜೈ ಭಾರತ ಜನನಿಯ ತನುಜಾತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ ಹಾಗೂ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಕನ್ನಡ ಹಾಡುಗಳನ್ನುವಿವೇಕಾನಂದ ಆಂಗ್ಲಮಾಧ್ಯಮ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸುಮಾರು 2000 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ 200 ಮಂದಿ ಶಿಕ್ಷಕ ಬಂಧುಗಳು ಹಾಡಿದರು.

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಹಶಿಕ್ಷಕಿ ಯಶೋದ ಸ್ವಾಗತಿಸಿ, ದಿವ್ಯರಾಣಿ ಸಂಕಲ್ಪ ವಿಧಿ ಬೋಧಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ಚಂದ್ರ ಶೇಖರ್ ರ್ಕಾರ್ಯಕ್ರಮ‌ ನಿರೂಪಿಸಿ, ವಂದಿಸಿದರು. ವಿವೇಕಾನಂದ ಆಂಗ್ಲಮಾಧ್ಯಮ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು,ಸದಸ್ಯರು, ಭೂಮಿ‌ ಕನ್‌ಸ್ಟ್ರಕ್ಷನ್ ಸಂಲಕರಾದ ನವೀನ್‌ ಪ್ರಸಾದ್‌ ರೈ ಕೈಕಾರ, ಮೆಸ್ಕಾಂ ನಿರ್ದೇಶಕ ಕಿಶೋರ್ , ವಿವೇಕಾನಂದ ಧ್ಯಾನ ಮಂದಿರ ನಿರ್ದೇಶಕಿ ಲಕ್ಷ್ಮೀ.ವಿ.ಜಿ.ಭಟ್, ಯಕ್ಷಗಾನ ಕಲಾವಿದ  ಭಾಸ್ಕರ ಶೆಟ್ಟಿ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರುಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here