ಪುತ್ತೂರು: ಸಂಪ್ಯ ಅನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಗೌರಿ ಪೈರವರು ಆನಂದಾಶ್ರಮದ ಅಂಗನವಾಡಿಗೆ ರೂ.೨ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಡುಗೆಯಾಗಿ ನಿರ್ಮಿಸಿದ ಮಕ್ಕಳ ಆಟದ ಜಾರುಬಂಡಿ, ಮೇರಿಗೋ ರೌಂಡ್ ಹಾಗೂ ಸೀ ಸಾ ಇದರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಆನಂದಾಶ್ರಮದ ಅಧ್ಯಕ್ಷೆ ಡಾ. ಗೌರಿ ಪೈ, ಟ್ರಸ್ಟ್ ಸದಸ್ಯರಾದ ಸದಾಶಿವ ಪೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಡಿಪಿಒ ಶ್ರೀಲತಾ, ಸೂಪರ್ವೈಸರ್ ಜಲಜಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಲಲಿತಾ, ಲಿರಿಶಾ, ಸಹಾಯಕಿ ನಳಿನಿ, ಬಾಲ ವಿಕಾಸದ ಅಧ್ಯಕ್ಷೆ ಉಷಾ ಹಾಗೂ ಮಕ್ಕಳ ಪೋಷಕರು ಇನ್ನಿತರರು ಉಪಸ್ಥಿತರಿದ್ದರು.