




ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್‌ನ ೨೦೨೧-೨೨ನೇ ಸಾಲಿನ ಜಮಾಬಂದಿ ಸಭೆ ಅ.೨೯ರಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಜಮಾಬಂದಿ ಅಧಿಕಾರಿಯಾಗಿದ್ದರು. ೨೦೨೧-೨೨ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ಹಾಗೂ ಗ್ರಾಮ ಪಂಚಾಯತದ ಲೆಕ್ಕಪತ್ರಗಳ ದಾಖಲೆ ಪರಿಶೀಲನೆ ನಡೆಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ ಆರ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಕೇಶವ ಗಾಂಧಿಪೇಟೆ, ಯತೀಶ್ ಬಾನಡ್ಕ, ಸೂರಪ್ಪ ಕುಲಾಲ್, ಸುಚೇತಾ ಬರೆಂಬೆಟ್ಟು, ಜಯಶ್ರೀ ಇರ್ಕಿ, ಸುಜಾತ ಕಲ್ಲೇರಿ, ಭವಾನಿ ಸಂಪ್ಯಾಡಿ, ರೋಹಿಣಿ ಆನ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಜೆರಾಲ್ಡ್ ಮಸ್ಕರೇನಸ್‌ರವರು ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ದುರ್ಗಾಪ್ರಸಾದ್ ಎಸ್.,ರವರು ೨೦೨೧-೨೨ನೇ ಸಾಲಿನ ಅನುದಾನ ಜಮೆ, ಖರ್ಚಿನ ವಿವರ ಮಂಡಿಸಿದರು. ಸಿಬ್ಬಂದಿಗಳಾದ ಮಾಧವ ಕೆ., ನಾರಾಯಣ ಎಸ್., ದೀಕ್ಷಿತಾ, ಚೇತನಾ, ಜಾನಕಿ ಸಹಕರಿಸಿದರು.












