ಅದೃಷ್ಟದ ಜೊತೆಗೆ ಪ್ರಯತ್ನವೂ ಸೇರಿಕೊಂಡಾಗ ಭವ್ಯ ಭವಿಷ್ಯ ‘

0

ವಿದ್ಯಾಮಾತಾ ” ವಿದ್ಯಾನಿಧಿ” ಯೋಜನೆ ಉದ್ಘಾಟಿಸಿ , ಮಠಂದೂರು ಅನಿಸಿಕೆ

ಪುತ್ತೂರು : ಈ ಕಲಿಯುವಿಕೆ , ಅಧ್ಯಯನವೆಲ್ಲಾವೂ ಕೇವಲ ವಿದ್ಯಾರ್ಥಿ ಘಟಕ್ಕೆ ಸೀಮಿತವಾಗಿರದೆ ,ಜೊತೆಗೆ ಜಗತ್ತಿನೆಲ್ಲೆಡೆ ನಡೆಯೋ ವಿದ್ಯಮಾನಗಳ ಬಗ್ಗೆ ತಿಳಿಯೋ ಸಣ್ಣ ಪ್ರಯತ್ನ ವಿರಬೇಕೂ. ಅದೃಷ್ಟದ ಜೊತೆಗೆ ಪ್ರಯತ್ನವು ಸೇರಿದಾಗ ಭವಿಷ್ಯ ಅದ್ಭುತವಾಗಿರುತ್ತದೆ ಎಂದು ಶಾಸಕ ಸಂಜೀವ ಮಠಂದೂರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ನ.30 ರಂದು ಎಪಿಎಂಸಿ ,ಹಿಂದೂಸ್ಥಾನ್ ಸಂಕೀರ್ಣ ಮಹಡಿಯಲ್ಲಿ ನಡೆದ ವಿದ್ಯಾ ಮಾತಾ ಅಕಾಡೆಮಿಯ ಮಾತೃಸಂಸ್ಥೆ , ವಿದ್ಯಮಾತಾ ಫೌಂಡೇಶನ್ ವತಿಯಿಂದ ಸುಮಾರು 50 ಅತೀ ಬಡ ಮಕ್ಕಳಿಗೆ ಆರ್ಥಿಕ ಚೈತನ್ಯವನ್ನು ಒದಗಿಸೋ ಸಲುವಾಗಿ ಆರಂಭಿಸಿರುವಂತಹ  ವಿದ್ಯಾನಿಧಿ ವಿನೂತನ ಯೋಜನೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿ , ಸಾಧನೆ , ಛಲ , ಸಮಯಪ್ರಜ್ಞೆ ,ಶಿಸ್ತುಗಳೆಲ್ಲಾವೂ ಗುರಿಸಾಧನೆಗೆ ಮೆಟ್ಟಿಲುಗಳು.ಇದರಿಂದಲೇ ಸಾರ್ಥಕ ಬದುಕೆಂದು ಹೇಳಿ ಅವರು ಹಾರೈಸಿದರು. ಬಳಿಕ ಹಾವೇರಿ ಜಿಲ್ಲೆಯಲ್ಲಿ ನ.13 ಅಗ್ನಿಪತ್ ನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಹಾಜರಾಗುವ 11 ವಿದ್ಯಾರ್ಥಿಗಳ ಸಹಿತ ಐ ಎ ಎಸ್ , ಎಸ್ ಡಿ ಎ , ಹಾಗೂ ರೆಗ್ಯುಲರ್ ಬ್ಯಾಚ್ ಇದರ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಹಾದಿಗೆ ಹಾರೈಸಿ , ಅಭಿನಂದಿಸಿದರು.

ಈ ಶುಭವೇಳೆ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ , ಇಂಗ್ಲಿಷ್ ಭಾಷಾ ಭೋಧನೆಯಲ್ಲಿ ಸುಮಾರು 40 ವರ್ಷಗಳ ಅನುಭವವಿರುವ ನುರಿತ ಶಿಕ್ಷಕ ವೇಣುಗೋಪಾಲ್ ವೇದಿಕೆಯಲ್ಲಿದ್ದರು.ಅಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ , ವಿದ್ಯಾಮಾತಾ ಫೌಂಡೇಶನ್ ಆಶ್ರಯದಲ್ಲಿ ನಡೆಯುವ “ವಿದ್ಯಾನಿಧಿ” ಯೋಜನೆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯೋ ಬಿಪಿಎಲ್ , ಅಂತ್ಯೋದಯ , ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ,ಕನ್ನಡ ಮಾಧ್ಯಮ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆ ಯಿರುವ ವಿದ್ಯಾರ್ಥಿಗಳಿಗೆ 6 ಸಾವಿರ ವಿದ್ಯಾರ್ಥಿ ವೇತನ , ಉಚಿತ ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ಕಲಿಕೆ , ಅರ್ಜಿ ಸಲ್ಲಿಕೆ ,6 ತಿಂಗಳ ಬ್ಯಾಂಕಿಂಗ್,ಪೊಲೀಸ್,ಅರಣ್ಯ, ಎಸ್ ಎಸ್ ಸಿ, ಪಿಡಿಒ ಸೇರಿ 25 ರಿಂದ 30 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ.
ಈ ಯೋಜನೆಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಗೌರವ ಧನವನ್ನು ಅಷ್ಟೇ ಸೇವಾ ಶುಲ್ಕವಾಗಿ ವಿಧಿಸಲಾಗುವುದು, ಅವಶ್ಯಕತೆ ಇರುವವರಿಗೆ ವಸತಿ ವ್ಯವಸ್ಥೆಯನ್ನು ಒದಗಿಸಿಕೊಡಲಾಗುವುದೆಂದು ಹೇಳಿ ,ಹಾರೈಸಿದರು.

ಸಂಸ್ಥೆಯ ಸಿಬ್ಬಂದಿಗಳಾದ ಮಿಲನ , ದೀಕ್ಷಿತಾ ,ಚಂದ್ರಕಾಂತ್ ಮತ್ತು ಸಂಪನ್ಮೂಲ ವ್ಯಕ್ತಿ ಹರ್ಷಿತಾ ವಿವಿಧ ರೀತಿಯಲ್ಲಿ ಸಹಕಾರ ನೀಡಿದರು. ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

ಅಗ್ನಿಪಥ್ ನೇಮಕಾತಿಗೆ ನಡೆದ ಹಾಸನ ರ‌್ಯಾಲಿಯಲ್ಲಿ ಉತ್ತೀರ್ಣರಾದ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳೂ ಅಂತಿಮ ಹಂತದ ಲಿಖಿತ ಪರೀಕ್ಷೆ ಬರೆದಿದ್ದು, ವೈಭವ್ ಸೋಮಣ್ಣ ಅಗ್ನಿವೀರ (ತಾಂತ್ರಿಕ) ಹುದ್ದೆಗೆ ಆಯ್ಕೆಯಾಗಿದ್ದಾರೆ. ಹಾವೇರಿ ರ‌್ಯಾಲಿಯಲ್ಲಿ ಉತ್ತೀರ್ಣ ರಾದ 11 ವಿದ್ಯಾರ್ಥಿಗಳಿಗೆ ನವೆಂಬರ್ 13 ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ,ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವೆ…

ಭಾಗ್ಯೇಶ್ ರೈ
ಅಧ್ಯಕ್ಷರು
ವಿದ್ಯಾಮಾತಾ ಅಕಾಡೆಮಿ.

LEAVE A REPLY

Please enter your comment!
Please enter your name here