ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಮಾಸಿಕ ಸಭೆಯಲ್ಲಿ ಶಕುಂತಲಾ ಟಿ. ಶೆಟ್ಟಿ
ಪುತ್ತೂರು : ಕೇಂದ್ರ ಹಾಗೂ ರಾಜ್ಯದಲ್ಲಿ ಜನ ವಿರೋಧಿ ಸರಕಾರವಿದೆ, ಮುಂದಿನ ಚುನಾವಣೆಯಲ್ಲಿ ಈ ಬಿಜೆಪಿ ಸರಕಾರವನ್ನು ಒದ್ದೋಡಿಸಲು ರಾಜ್ಯದ ಜನ ತೀರ್ಮಾನಿಸಿದ್ದಾರೆ ಎಂದು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಹೇಳಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಬಿಜೆಪಿ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಜನರಿಗೆ ಬೇಕಾದ ಕಾರ್ಯಕ್ರಮ ರೂಪಿಸದ ಬಿಜೆಪಿ ಸರಕಾರ ಅವಶ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕೇಂದ್ರದ ಮೋದಿ ಸರಕಾರ ತಿನ್ನುವ ಅನ್ನ, ಚಪಾತಿ, ಪರೋಟಕ್ಕೂ ಜಿಎಸ್‌ಟಿ ತೆರಿಗೆ ಹಾಕಿದೆ, ರೋಗಿಗಳ ಔಷದಿಗೂ ತೆರಿಗೆಯ ಹೊರೆ ಹಾಕಿ ಜನರು ಬದುಕದಂತೆ ಮಾಡುತ್ತಿದ್ದಾರೆ. ಇದೀಗ ಬಿಜೆಪಿ ಸರಕಾರದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು 40% ಕಮಿಷನ್ ದಂಧೆಯಲ್ಲಿ ನಿರತರಾಗಿ ಹಣ ದರೋಡೆ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಜನ ಅಧಿಕಾರದಿಂದ ಬಿಜೆಪಿ ಸರಕಾರವನ್ನು ಒದ್ದೋಡಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ನಾನು ಶಾಸಕಿಯಾಗಿದ್ದಾಗ ತಂದ ಅಭಿವೃದ್ಧಿ ಕಾರ್ಯಕ್ರಮವನ್ನು ತಾನು ತಂದದ್ದು ಎಂದು ಶಾಸಕ ಸಂಜೀವ ಮಠ೦ದೂರು ಬಿಲ್ಡಪ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವು ಸದೃಢವಾಗಿ ಬೆಳೆಯುತ್ತಿದೆ, ಅದಕ್ಕೆ ಪಕ್ಷದ ಕಾರ್ಯಕರ್ತರ ಶ್ರಮವೇ ಮುಖ್ಯ ಕಾರಣ, ಸಂಘಟನೆಯಲ್ಲಿ ಎತ್ತಿದ ಕೈ ಆಗಿರುವ ಮಹಮ್ಮದ್ ಅಲಿಯವರು ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ನಗರಸಭಾ ಸದಸ್ಯ ಶಕ್ತಿಸಿನ್ಹ ಮಾತನಾಡಿ ಪಕ್ಷ ವಿರೋಧಿ ಕೆಲಸ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಎಚ್. ಮಹಮ್ಮದ್ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಗರಸಭೆಯ 31 ವಾರ್ಡ್‌ಗಳಲ್ಲಿ 5 ವಲಯ ಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ವಲಯಕ್ಕೂ ಉಸ್ತುವಾರಿಗಳನ್ನು ನೇಮಿಸಿ ಅವರಿಗೆ ಆಯಾಯ ವಲಯದಲ್ಲಿ ಪಕ್ಷ ಸಂಘಟನೆ ಮತ್ತು ಬೂತ್ ಸಮಿತಿ ರಚನೆ ಮಾಡುವ ಜವಾಬ್ದಾರಿ ನೀಡಲಾಗುವುದು, ಪ್ರತಿ ಬೂತ್‌ನಲ್ಲಿ ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡುವ 10 ಜನರ ತಂಡವನ್ನು ರಚಿಸಲಾಗುವುದು ಎಂದು ಹೇಳಿದರು. ಪಕ್ಷದ ಪದಾಧಿಕಾರಿಗಳು ಎಂದು ಹೇಳುವ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ಪೋಸ್ಟ್‌ಗಳನ್ನು ವೈರಲ್ ಮಾಡುತ್ತಿದ್ದಾರೆ, ಈ ಕುರಿತು ನಾವು ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತಂದಿರುತ್ತೇವೆ, ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು ದಾಖಲೆ ಸಹಿತ ದೂರು ಕೊಡಲು ಸೂಚಿಸಿರುತ್ತಾರೆ. ಆದುದರಿಂದ ಪಕ್ಷದ ಪದಾಧಿಕಾರಿಗಳು ಎಂದು ಹೇಳುವವರು ಪಕ್ಷದ ನಾಯಕರ ವಿರುದ್ಧ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ಹಾಕುತ್ತಿರುವ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ತೆಗೆದು ನಮಗೆ ಕಳುಹಿಸಿ ಕೊಡಬೇಕು ಎಂದು ಅಲಿಯವರು ಹೇಳಿದರು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಮೌರಿಸ್ ಮಸ್ಕರೇನಸ್, ದಿನೇಶ್ ಪಿ.ವಿ, ಕಾರ್ಯದರ್ಶಿಗಳಾದ ರೋಷನ್ ರೈ ಬನ್ನೂರು, ರಾಮಚಂದ್ರ ನಾಯ್ಕ್, ಸೂಫಿ ಬಪ್ಪಳಿಗೆ, ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್, ಯುವ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಂಜಿತ್ ಬಂಗೇರ, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಿ.ಎಚ್ ಶುಕೂರು ಹಾಜಿ, ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ನಗರ ಸಭೆಯ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ನಗರಸಭಾ ಸದಸ್ಯ ರೋಬಿನ್ ತಾವ್ರೋ, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಯೂಸುಫ್ ಸಾಲ್ಮರ, ಸೂರಜ್ ಶೆಟ್ಟಿ ಸಾಮೇತಡ್ಕ, ದಿನೇಶ್ ಕಾಮತ್, ನಾರಾಯಣ ಕುಡ್ವ ಸಿಟಿಓ ರಸ್ತೆ, ವಿಕ್ಟರ್ ಪಾಯ್ಸ್ ಮಂಜಲ್ ಪಡ್ಪು, ಮಂಜುನಾಥ ಕೆಮ್ಮಾಯಿ, ಯೂಸುಫ್ ಕೆಮ್ಮಾಯಿ , ಕೃಷ್ಣಪ್ಪ ಪೂಜಾರಿ ನೆಕ್ಕರೆ ಬೆದ್ರಾಳ, ಹಮೀದ್ ಹಾಜಿ ಉಜ್ರುಪಾದೆ, ವಿಲ್ಫ್ರೆಡ್ ಡಿ. ಸೋಜಾ ಉರ್ಲಾ೦ಡಿ, ನವೀನ್ ಗೌಡ ಸೇವಿರೆ, ಅಬ್ದುಲ್ ರಜಾಕ್ ಆರ್.ಪಿ, ಇಸ್ಮಾಯಿಲ್ ಬೊಲ್ವಾರು, ವಾಲ್ಟರ್ ಸಿಕ್ವೆರಾ ಕೊಡಿಜಾಲ್, ರಫೀಕ್ ಮೊಟ್ಟೆತಡ್ಕ, ರವೀಂದ್ರ ರೈ ಇಂದಿರಾನಗರ, ರೋಸಿಲಿ ಡಿ. ಕಾಸ್ಟ್ ಮರೀಲ್, ಇಬ್ರಾಹಿಂ ಉಜ್ರುಪಾದೆ, ಕಲಾವಿದ ಕೃಷ್ಣಪ್ಪ, ಹಮೀದ್ ಮೊಟ್ಟೆತಡ್ಕ, ಅಲ್ಫೋನ್ಸ್ ಎಪಿಎಂಸಿ ರಸ್ತೆ, ದೇವಪ್ಪ ಕಾರೆಕಾಡ್, ಜಯಂತ ನಗರ, ರೋನಿ ಮೊಂತೆರೊ ಮೊಟ್ಟೆತಡ್ಕ, ಅಹ್ಮದ್ ಬನ್ನೂರು, ಅಬ್ದುಲ್ ಕುಂಹಿ ಮೊಟ್ಟೆತಡ್ಕ ಮೊದಲಾದವರು ಉಪಸ್ಥಿತರಿದ್ದರು.
ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದಾಮೋದರ ಭಂಡಾರ್ಕರ್ ಸ್ವಾಗತಿಸಿ, ನಗರ ಸಭಾ ಮಾಜಿ ಸದಸ್ಯ ಮುಕೇಶ್ ಕೆಮ್ಮಿ೦ಜೆ ವಂದಿಸಿದರು.