ಪುತ್ತೂರು: ಉರ್ಲಾಂಡಿ ಶ್ರೀಸತ್ಯನಾರಾಯಣ ಬಾಲಗೋಕುಲ ವತಿಯಿಂದ ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯಲ್ಲಿ ದೀಪ ಪೂಜಾ ಕಾರ್ಯಕ್ರಮ ಅ.30ರಂದು ಜರಗಿತು. ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ಸರಸ್ವತಿ ಭಜನಾ ಮಂದಿರದ ಅಧ್ಯಕ್ಷ ರಘುರಾಮ್ ಹೆಗ್ಡೆ, ಹಿರಿಯರಾದ ಶೇಷಪ್ಪಗೌಡ, ಕೃಷ್ಣಪ್ಪ, ಸತ್ಯನಾರಾಯಣ ಕಟ್ಟೆ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಂಬ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೀಪ ಪೂಜಾದ ಮಹತ್ವ ತಂದೆ ತಾಯಿಯ ಪಾದ ಪೂಜೆಯ ಮಹತ್ವದ ಬಗ್ಗೆ ತಿಳಿಸಲಾಯಿತು. ಮಕ್ಕಳಿಗೆ ದೀಪ ಪೂಜನ, ತಂದೆ ತಾಯಿ ಪಾದಪೂಜೆ, ಮಕ್ಕಳ ಕುಣಿತ ಭಜನೆ ಹಾಗೂ ಗೂಡು ದೀಪ ರಚನೆ, ರಂಗೋಲಿ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಜಲಜಾಕ್ಷಿ, ಭಾರತಿ ಜಯರಾಮ್ ಹೆಗ್ಡೆ, ಅಶೋಕ್ ಕುಂಬ್ಳೆ ಸಹಕರಿಸಿದರು. ಅನ್ವಿತಾ, ಶಿವಪ್ರಸಾದ್, ಸಾನ್ವಿ, ಆರ್ಯ ಪ್ರಾರ್ಥಿಸಿದರು, ಜಯಶ್ರೀ ಶಿವರಾಂ ಸ್ವಾಗತಿಸಿ, ಧನ್ಯವಾದಗೈದರು. ಚೇತನ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.
ಸರಿತಾ ಅಶೋಕ್ ಹೆಗ್ಡೆ, ಜಯಲಕ್ಷ್ಮಿ, ಸುಮಾವತಿ, ಮೀನಾಕ್ಷಿ, ಶ್ರಾವಣಿ, ಸುಜಿತ್, ಪ್ರಸನ್ನ, ಶರತ್ ಮುರುಗೇಶ್, ಪುಷ್ಪರಾಜ್, ಮನೋಹರ್, ಶೋಭರಾಜ್, ಜಯರಾಮ್ ಗೌಡ, ಮುರುಗೇಶ್ ಸುನಿತ್ ನಾಯ್ಕ, ಶರತ್ ನಾಯ್ಕ, ವಿನೋದ್, ಕೃಷ್ಣ ಕುಮಾರಿ, ವಿವೇಕ್ ಹೆಗ್ಡೆ, ಶಿವರಾಮ ಗೌಡ, ದಯಾನಂದ, ನಿತಿನ್, ಜಯರಾಮ್, ರಜನೀಶ್, ಕಿಶನ್, ತನುಶ್, ಯತಿನ್, ಯಶನ್, ತನ್ಮಯ್, ಶಿವಪ್ರಸಾದ್, ಆರ್ಯ, ಚಾರಿತ್ರ್ಯ, ಭೂಮಿಕ, ಹನ್ಸಿಕ, ಸಾಕ್ಷಿ, ಸಾನ್ವಿ, ತೇಜಸ್, ಲವಿತ್, ಪೂರ್ಣ ವಂಶಿ, ಪ್ರಕಾರ ಕುಲ್, ಪ್ರಖ್ಯಾತ್, ರಿಷಿತ್ ಮತ್ತಿತರರು ಉಪಸ್ಥಿತರಿದ್ದರು. ದೀಕ್ಷಿತ್ ಸಂಪ್ಯ, ಮನೋಜ್ ನಾಯ್ಕ, ಭರತ್ ರಾಜ್ ಸಹಕರಿಸಿದರು. ಬಳಿಕ ಸಹಭೋಜನ ನಡೆಯಿತು.