ಹಿರಿಯ ಎಂಟು ಚೇತನಗಳಿಗೆ ಸನ್ಮಾನ |ನೂತನ ಸಹಕಾರಿ ಶಾಖೆ ಶೀಘ್ರದಲ್ಲೇ ಅಸ್ತಿತ್ವಕ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹಿರಿಯ ಎಂಟು ಚೇತನಗಳಿಗೆ ಸನ್ಮಾನ |ನೂತನ ಸಹಕಾರಿ ಶಾಖೆ ಶೀಘ್ರದಲ್ಲೇ ಅಸ್ತಿತ್ವಕ್ಕೆ
ಸವಿತಾ ಸಮಾಜದ ವಾರ್ಷಿಕೋತ್ಸವದಲ್ಲಿ ಸಹಕಾರಿ ಉಪಾಧ್ಯಕ್ಷರಿಂದ ಘೋಷಣೆ

ಪುತ್ತೂರು : ತಾಲೂಕು ಸವಿತಾ ಸಮಾಜ ರಿ ,ಇದರ ವತಿಯಿಂದ 2 ನೇ ವರುಷದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಮೂರನೇ ವರುಷದ ವಾರ್ಷೀಕೊತ್ಸವವೂ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡು , ಸುದೀರ್ಘ ಸೇವೆ ನೀಡಿದ ಹಿರಿಯ ಚೇತನಗಳಿಗೆ ಸನ್ಮನಾ ಕಾರ್ಯಕ್ರವೂ ನ.1 ರಂದು ಇಲ್ಲಿನ ದರ್ಬೆ ಮುಖ್ಯರಸ್ತೆ ,ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಇದರ ,ಎ.ಪಿ.ರೈ ಸ್ಮಾರಕ ಸಭಾಭವನದಲ್ಲಿ ನಡೆಯಿತು.

ಪೂಜಾ ಕೈಂಕರ್ಯವನ್ನು ಪುರೋಹಿತ ಶ್ರೀಧರ್ ಭಟ್ ಕಬಕ ನೆರವೇರಿಸಿ ,ಸಮಾಜ ಭಾಂಧವರ ಏಳಿಗೆಗೆ ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಎಲ್ ಬಂಗೇರ ಮಾತನಾಡಿ ,80 ರ ದಶಕದಲ್ಲಿ ದಿ.ಕುಳಾಯಿ ವಿಠಲ್ ಭಂಡಾರಿಯವರ ನೇತೃತ್ವದಲ್ಲಿ ಆರಂಭಗೊಂಡಿರುವಂಥಹ ಸಂಘವೂ ಉಭಯ ಜಿಲ್ಲೆಯನ್ನೊಳಗೊಂಡು ಹೆಮ್ಮರವಾಗಿ ಬೆಳೆದು ಬಂದಿದೆ.ಇವರು ಸವಿತಾ ಸಮಾಜ ಭಾಂಧವರ ಏಳಿಗೆಗಾಗಿ ಗಟ್ಟಿ ಅಡಿಪಾಯ ಹಾಕಿಕೊಟ್ಟಂತಹ ಧೀಮಂತ ವ್ಯಕ್ತಿ.ಇಂತಹ ಸಂಘದಿಂದ ಜಗತ್ತೇ ಚಮತ್ಕಾರಗೊಳ್ಳುವಂಥ ಕೆಲಸವಾಗಲಿ ಜೊತೆಗೆ ಸವಿತಾ ‘ಸ್ ಬ್ಯೂಟಿ ಮಾಳಿಗೆಯಿಂದ ಕ್ಷೌರಿಕ ಸಲಕರಣೆಗಳನ್ನು ಯೋಗ್ಯ ದರದಲ್ಲಿ, ತಾವಿದ್ದಲ್ಲಿಗೆ ಒದಗಿಸೋ ಕಾರ್ಯವನ್ನು ಕೂಡ ಮುಂದಿನ ಕೆಲ ದಿನಗಳಲ್ಲಿ ನಡೆಯಲಿದೆಯೆಂದು ತಿಳಿಸಿದರು.
ಕಡಬ ಸವಿತಾ ಸಮಾಜದಧ್ಯಕ್ಷ ವಸಂತ್ ಮಾತನಾಡಿ , ಸಂಘಟನೆಯಿಂದ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯಲು ಸಾಧ್ಯ.ನಿಂತ ನೀರಾಗದೇ ,ಹರಿಯೋ ನೀರಿನಂತೆ ಕಾರ್ಯ ಸಾಗಲಿಯೆಂದರು.
ಸವಿತಾ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಮಾತನಾಡಿ ,ಅದ್ಬುತ ಕಾರ್ಯಕ್ರಮ ,8 ಹಿರಿ ಮುತ್ತುಗಳನ್ನು ಗೌರವಿಸಿದ್ದು ,ಪ್ರಶಂಶಾನೀಯ. ಸಹಕಾರಿಯಿಂದ ಸಮಾಜ ಬಾಂಧವರಿಗೆ ಕಡಿಮೆ ಬಡ್ಡಿಯಲ್ಲಿ ಸಿಗೋ ಸೌಲಭ್ಯ ಸಹಿತ ಹಲವೂ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಈ ವೇಳೆ ಸಮಾಜ ಭಾಂಧವರು ತಾಲೂಕಿನಲ್ಲೂ ಸವಿತಾ ಸಮಾಜ ಸಹಕಾರಿಯ ಶಾಖೆ ಆರಂಭಿಸುವಂತೆ ವಿನಂತಿಸಿದ್ದಾಗ , ಎರಡನೇಯ ಶಾಖೆಯನ್ನು ಪುತ್ತೂರಿನಲ್ಲಿಯೇ ಪ್ರಾರಂಭಿಸೋದಾಗಿ ಅವರು ಭರವಸೆ ನೀಡಿ ,ಸಮಾಜ ಬಾಂಧವರಿಗೆ ಹಾರೈಸಿದರು.ಸವಿತಾ ಸೌಹಾರ್ದ ಸಹಕಾರಿ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ,
ಸಹಕಾರಿಯ ನಿರ್ದೇಶಕಿ ಸುಮಾ ಸುರೇಂದ್ರ ಭಂಡಾರಿ ,ಪಾಣಾಜೆ ಕೃಷಿ ಪತ್ತಿನ ಸಹಕಾರಿಯ ರವೀಂದ್ರ ಭಂಡಾರಿ ,ಸವಿತಾ ಸಮಾಜ ಜಿಲ್ಲಾ ಕಾರ್ಯದರ್ಶಿ ವಸಂತ ಬೆಳ್ಳೂರು ,ಜಿಲ್ಲಾಧ್ಯಕ್ಷ ಆನಂದ್ ಭಂಡಾರಿ ಸಂಧರ್ಭೊಚಿತವಾಗಿ ಮಾತಾಡಿ ಹರಸಿ ,ಅಭಿನಂದಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ,ತಾಲೂಕು ಅಧ್ಯಕ್ಷ ಜಿ.ಬಿ.ವೆಂಕಟೇಶ್ ಭಂಡಾರಿ , ಯಾವುದೇ ಹುದ್ದೆಯಲ್ಲೂ ಕಷ್ಟ-ನಷ್ಟಗಳನ್ನೂ ಸಹಿಸಿಕೊಂಡು ಸಾಗಬೇಕು.ತಾಳ್ಮೆ ,ಪರಿಶ್ರಮ ಇದ್ದರೆ ಉನ್ನತ ಮಟ್ಟಕ್ಕೆ ಏರಬಹುದು.ಅಧ್ಯಕ್ಷ ಹುದ್ದೆ ಏರಿದ ಬಳಿಕ ಸಂಘದ ನೋಂದಾವಣೆಯಾಗಿದೆ ,ಮುಂದೆ ಸಂಘದ ಕಟ್ಟಡವೂ ಏದ್ದು ನಿಲ್ಲಲು ದೇವರ ಅನುಗ್ರಹ ಸಿಗಲಿ.ಯಾವ ಸಮಾಜವೂ ನಮ್ಮನ್ನು ಗುರುತಿಸಿಲ್ಲ ,ನಾವೂ ಸೆಟೆದು ,ಮೈ ಕೊಡವಿ ನಿಂತರೆ ಅದು ಸಾಧ್ಯವೆಂದು ಹೇಳಿ ಎಲ್ಲರಿಗೂ ವಂದಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ :

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳ ಮುಂದೆ ,ನೂತನ ಸಾಲಿಗೆ ಅಧ್ಯಕ್ಷರಾಗಿ ರಮೇಶ್ ಭಂಡಾರಿ ಮುರ ,ಕಾರ್ಯದರ್ಶಿ ಶರತ್ ಪುರುಷರಕಟ್ಟೆ ಹಾಗೂ ಖಜಾಂಜಿ ಪ್ರವೀಣ್ ಎಪಿಎಂಸಿ ಇವರುಗಳನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

ಹಾಲಿ ,ಮಾಜಿ ಅಧ್ಯಕ್ಷರಿಗೆ ಸನ್ಮಾನ:

ವಿನೂತನ ಅಧ್ಯಕ್ಷ ರಮೇಶ್ ಭಂಡಾರಿ ಮತ್ತು ಮಾಜಿ ಅಧ್ಯಕ್ಷ ಜಿ.ಬಿ.ವೆಂಕಟೇಶ್ ಭಂಡಾರಿಯವರನ್ನು ಕುಂಬ್ರ ವಲಯ ಸವಿತಾ ಸಮಾಜ ಸಂಘದ ವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಆನಂದ್ ಸಾಲ್ಯಾನ್ ,ಭುಜಂಗ ಸಾಲ್ಯಾನ್ ,
ಪುತ್ತೂರು ಸವಿತಾ ಸಮಾಜ ಬಾಂಧವರು ,ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಕೂಡ ಹಾಜರಿದ್ದರು. ಜಯ ಕುಮಾರ್ ಕೇಪುಳು ಸ್ವಾಗತಿಸಿ ,ಭವಿತ್ ಕಾರ್ಪಾಡಿ ಪ್ರಾರ್ಥನೆ ನೆರವೇರಿಸಿ ,ಪ್ರವೀಣ್ ಪೆರ್ಲಂಪಾಡಿ ನಿರೂಪಿಸಿ ,ಶರತ್ ಪುರುಷರಕಟ್ಟೆ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.