ಪುತ್ತೂರು ತಾಲೂಕು ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಸಂಪ್ಯದ ಕೇಂದ್ರ ಕಚೇರಿಗೆ ನಬಾರ್ಡ್ ಅಧಿಕಾರಿಯಾದ ಸಂಗೀತ ಕರ್ತರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸಂಗೀತ ಕರ್ತರವರು ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಹಾಗೂ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು,ಆರ್ಥಿಕವಾಗಿ ಕುಸಿದಿದ್ದ ಸಹಕಾರಿ ಸಂಘವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದ ಆಡಳಿತ ಮಂಡಳಿಯ ಶ್ರಮದ ಬಗ್ಗೆ ಪ್ರಶಂಸೆ ವ್ಯಕಪಡಿಸಿದರು,
MSC ಯೋಜನೆಯಲ್ಲಿ ಕೃಷಿಗೆ ಸಂಬಂಧ ಪಟ್ಟ ಉದ್ಯಮಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುವುದು ಈ ಯೋಜನೆಯಲ್ಲಿ ಸಹಕಾರಿ ಸಂಘವು ಉದ್ಯಮ ನಡೆಸಲು ಮುಂದಾಗಬಹುದು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿಗಳಾದ ಗಣೇಶ್,ಶರತ್ ಡಿ ,ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಣಾಧಿಕಾರಿಗಳಾದ ಜಯಂತಿ ಭಾಸ್ಕರ್, ಸಹಕಾರಿ ಸಂಘದ ವ್ಯವಸ್ಥಾಪಕ ಅಜಿತ್ ಕುಮಾರ್ ರೈ,ಸಿಬ್ಬಂದಿಗಳಾದ ಉಮೇಶ್ ಎಸ್ ಕೆ, ಪ್ರಶಾಂತಿ, ಅರ್ಜುನ್ ಭಾಸ್ಕರ್,ಉಪಸ್ಥಿತರಿದ್ದರು.