ಹಿರಿಯ ಕಾಂಗ್ರೆಸಿಗ ರಾಮಣ್ಣ ಪೂಜಾರಿ ಬೆದ್ರಾಳ ನಿಧನ

0

ಪುತ್ತೂರು: ಬೆದ್ರಾಳ ಜಂಕ್ಷನ್ ನಲ್ಲಿ ಹಲವಾರು ವರ್ಷ ಗೂಡಂಗಡಿ ಉದ್ಯೋಗವನ್ನು ನಡೆಸಿಕೊಂಡು ಬರುತ್ತಿದ್ದ ಹಾಗೂ ಹಿರಿಯ ಕಾಂಗ್ರೆಸಿಗರಾಗಿರುವ ರಾಮಣ್ಣ ಪೂಜಾರಿ(92ವ.) ರವರು ಅಸೌಖ್ಯದಿಂದ ನ.3 ರಂದು ನಿಧನ ಹೊಂದಿದ್ದಾರೆ.

ಮೃತ ರಾಮಣ್ಣ ಪೂಜಾರಿಯವರು ಗೂಡಂಗಡಿ ವೃತ್ತಿಯನ್ನು ನಡೆಸುವುದರ ಜೊತೆಗೆ ಸಣ್ಣ ಮಟ್ಟಿನ ನಾಟಿ ವೈದ್ಯರಾಗಿ ಸಮಾಜಮುಖಿ ಸೇವೆ ಸಲ್ಲಿಸಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಲೀಲ, ಪುತ್ರರಾದ ಕಲ್ಲಾರೆ ಕುಶನ್ ವಕ್ಸ್೯ ಉದ್ಯೋಗಿ ಕೃಷ್ಣಪ್ಪ ಪೂಜಾರಿ, ದರ್ಬೆ ನಂದಿಕೇಶ್ ಇಲೆಕ್ಟ್ರಿಕಲ್ಸ್ ಮಾಲಕ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ, ತಾಲೂಕು ಎಲೆಕ್ಟ್ರಿಕಲ್ ಗುತ್ತಿಗೆದಾರರ ಸಂಘದ ಕೋಶಾಧಿಕಾರಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ,,ಸಿಡ್ಕೋ ಬ್ಯಾಂಕಿನ ನಿರ್ದೇಶಕರಾಗಿರುವ ಕೇಶವ ಪೂಜಾರಿ ಬೆದ್ರಾಳ, ಪುತ್ರಿಯರಾದ ಕಮಲ, ಮೋಹಿನಿ, ಸೊಸೆಯಂದಿರಾದ ಆಶಾ, ಸವಿತ, ಅಳಿಯ ಬಾಬು ಪೂಜಾರಿ ಕಲ್ಪಡ ಕಾಣಿಯೂರು, ಮೊಮ್ಮಕ್ಕಳಾದ ಮನ್ವಿತಾ, ಪ್ರನ್ವಿತ್, ರಿಶಿತ್, ಲಾವಣ್ಯ, ಲತಾ, ಪೂಜಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here