ದರ್ಬೆ: ಕೊಠಡಿಯಲ್ಲಿಟ್ಟಿದ್ದ ಪಟಾಕಿಗೆ ಬೆಂಕಿ- ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

0

ಪುತ್ತೂರು: ದರ್ಬೆ ಬೈಪಾಸ್ ಬಳಿಯ ಕಟ್ಟಡವೊಂದರ ನೆಲ ಅಂತಸ್ತಿನ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ತಗುಲಿ ಸ್ಪೋಟಗೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಟ್ಟಡದೊಳಗೆ ಅಕ್ರಮವಾಗಿ ಸುಡುಮದ್ದು ದಾಸ್ತಾನು ಆರೋಪದಲ್ಲಿ ಸ್ಪೋಟಕ ಕಾಯ್ದೆ 1884, 9ಬಿ ಅಡಿಯಲ್ಲಿ ಕಟ್ಟಡ ಮಾಲಕ ಕರುಣಾಕರ ರೈಯವರ ವಿರುದ್ಧ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಈ ಮಾಹಿತಿ ನೀಡಿದ್ದಾರೆ.

ದರ್ಬೆಯಲ್ಲಿ ಉದ್ಯಮಿ ಕರುಣಾಕರ ರೈ ಮಾಲಕತ್ವದ ಆರಾಧ್ಯ ಕಾಂಪ್ಲೆಕ್ಸ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಹಸಿರು ಪಟಾಕಿಗಳಿಗೆ ನ.1ರಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೊಠಡಿಯೊಳಗಿದ್ದ ಧರೇಶ್ ಎಂಬವರು ಪಟಾಕಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಭರದಲ್ಲಿ ಅವರ ಕಾಲಿಗೆ ಸುಟ್ಟ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ಶಮನಗೊಳಿಸಿ ಅನಾಹುತ ತಪ್ಪಿಸಿದ್ದರು. ತಾವು ಸ್ವಂತ ಉದ್ದೇಶಕ್ಕಾಗಿ ಪಟಾಕಿ ತಂದಿರಿಸಿಕೊಂಡಿದ್ದೇ ಹೊರತು ಮಾರಾಟ ಮಾಡುವ ಉದ್ದೇಶದಿಂದ ತಂದು ದಾಸ್ತಾನಿರಿಸಿದ್ದು ಅಲ್ಲ ಎಂದು ಕಟ್ಟಡ ಮಾಲಕ ಕರುಣಾಕರ ರೈಯವರು ಸ್ಪಷ್ಟನೆ ನೀಡಿದ್ದರು.

LEAVE A REPLY

Please enter your comment!
Please enter your name here