ಸೊಂಟ ನೋವಿನಿಂದ ಬಳಲುತ್ತಿದ್ದ ವೃದ್ಧ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು:ಸೊಂಟ ನೋವಿನಿಂದ ಬಳಲುತ್ತಿದ್ದ ವೃದ್ಧರೋರ್ವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರಾಡಿ ನಂದಿಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಹಾರಾಡಿ ನಂದಿಲ ನಿವಾಸಿ ತೋಮಸ್ ಬ್ಯಾಪ್ಟಿಸ್ಟ್(73ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.ಹಲವು ಸಮಯದಿಂದ ಸೊಂಟ ನೋವಿನಿಂದ ಬಳಲುತ್ತಿದ್ದು,ಮಂಗಳೂರು ಆಸ್ಪತ್ರೆಯಿಂದ ಔಷಧಿ ಪಡೆಯುತ್ತಿದ್ದರು.ಆದರೂ ಸೊಂಟ ನೋವು ಕಡಿಮೆ ಆಗಿಲ್ಲ ಎಂದು ಅ.31ರಂದು ಅವರು ಮನೆಯ ಶೆಡ್‌ನ ಪಕ್ಕದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಕುರಿತು ಮೃತರ ಪತ್ನಿ ಲೂಸಿ ಮಸ್ಕರೇನಸ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here