ಎಸ್.ಕೆ ಎಸ್.ಎಸ್.ಎಫ್ ಕುಂತೂರು ಕ್ಲಸ್ಟರ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಲಂಕಾರಿನಲ್ಲಿ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮ

0

ಅಲಂಕಾರು: ಎಸ್.ಕೆ ಎಸ್.ಎಸ್.ಎಫ್ ಕುಂತೂರು ಕ್ಲಸ್ಟರ್ ವತಿಯಿಂದ ಆಲಂಕಾರು ಪೇಟೆಯಲ್ಲಿ ಮಾದಕ ವ್ಯಸನದ ವಿರುದ್ದ ಜನ ಸಂಚಾಲನ ಕಾರ್ಯಕ್ರಮ ನಡೆಯಿತು.
ಆಲಂಕಾರು ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ನಿಂಗರಾಜುರವರು ಮಾದಕ ವ್ಯವಸನದ ವಿರುದ್ದ ಜನ ಸಂಚಾಲನವನ್ನು ಉದ್ಘಾಟಿಸಿ ಮಾದಕ ವ್ಯಸನ ಸಮಾಜಕ್ಕೆ ಎದುರಾದ ಕಂಟಕವಾಗಿದೆ. ಮಾದಕ ವ್ಯಸನ ಪಿಡುಗನ್ನು ತಡೆಗಟ್ಟದಿದ್ದರೆ ಸಮಾಜ ದಲ್ಲಿ ಅಶಾಂತಿ ನೆಲೆನಿಲ್ಲಲಿದೆ. ಈ ಕಾರ್ಯಕ್ರಮದಿಂದಾಗಿ ಮಾದಕ ವ್ಯಸನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಂತಾಗಿದೆ. ಈ ದಿಸೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಇಟ್ಟ ಹೆಜ್ಜೆ ಶ್ಲಾಘನೀಯ, ಎಂದು ತಿಳಿಸಿ ಮಾದಕ ವ್ಯಸನದ ಜನ ಸಂಚಾಲನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಅಧ್ಯಕ್ಷತೆಯನ್ನು ಕುಂತೂರು ಕ್ಲಸ್ಟರ್ ಅಧ್ಯಕ್ಷರಾದ ಮೊಹಮ್ಮದ್ ಆಲಿ ವಹಿಸಿದ್ದರು. ಶಂಸುದ್ದೀನ್ ಸುಂಕದಕಟ್ಟೆ ಮಾತನಾಡಿ ಸಮಾಜ ದಲ್ಲಿ ಮಾದಕ ವ್ಯಸನದ ಪಿಡುಗು ಅಧಿಕವಾಗಿದ್ದು ಸಮಾಜದ ಪ್ರಮುಖರು, ಹಿರಿಯರು, ತಂದೆ,ತಾಯಿಗಳು ಎಚ್ಚರಿಕೆ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಲಿದ್ದು ಈ ಬಗ್ಗೆ ಜಾಗೃತರಾಗುವಂತೆ ತಿಳಿಸಿದರು.

ದುವಾ ವನ್ನು ಕುಂತೂರು ಮುದರ್ರಿಸ್ ಮೊಯ್ ದು ಫೈಝಿ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಎಸ್.ಕೆ ಎಸ್.ಎಸ್.ಎಫ್ ವಲಯಾದ್ಯಕ್ಷ
ಫಯಾಝ್ ಅಝ್ಹರಿ , ನೆಕ್ಕರೆ ಖತೀಬ್ ಖಾಲಿದ್ ಫೈಝಿ, ನೆಕ್ಕರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಎಸ್.ಕೆ.ಎಸ್.ಎಸ್.ಎಫ್ ನ ಪ್ರಮುಖರಾದ ಅಝಾದ್ ನೆಕ್ಕರೆ, ಅಬ್ದುಲ್ ರಹ್ಮಾನ್ ಫೈಝಿ,ಅಶ್ರಫ್ ಮುಸ್ಲಿಯಾರ್, ನಿರೀಕ್ಷಕರಾದ ಟಿ.ಎಚ್ ಶರೀಫ್ ದಾರಿಮಿ, ಬದ್ರುದ್ದೀನ್ ಅಸ್ಲಮಿ, ಝಕರಿಯಾ ಮದನಿ, ಶಫಿಯುಲ್ಲಾ, ಅಬ್ದುಲ್ ಖಾದರ್ ಶೇಡಿಗುಂಡಿ, ಇರ್ಷಾದ್ ನೆಕ್ಕರೆ, ಹನೀಫ್ ದಾರಿಮಿ, ಬಶೀರ್ ಕೋಚಕಟ್ಟೆ, ಕುಂಡಾಜೆ ಎಸ್.ಕೆ ಎಸ್.ಎಸ್.ಎಫ್ ನ ಅಧ್ಯಕ್ಷರಾದ ಶಾಹುಲ್ ಹಮೀದ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಪ್ ಕರ್ನಾಟಕ ರಾಜ್ಯ ಕ್ಯಾಂಪಸ್ ವಿಂಗ್ ಸದಸ್ಯ ಝುನೈಫ್ ಕೋಲ್ಪೆ ಶುಭ ಹಾರೈಸಿದರು.
ಕ್ಲಸ್ಟರ್ ಮಟ್ಟದ ಕಾರ್ಯದರ್ಶಿ ಅಬ್ದುಲ್ ರಶೀದ್ ಯಮಾನಿ ಕಡಬ ಸ್ವಾಗತಿಸಿ,ಅಬ್ದುಲ್ ರಹ್ಮಾನ್ ಕಡಬ ವಂದಿಸಿದರು.

LEAVE A REPLY

Please enter your comment!
Please enter your name here