ಕುಂಬ್ರ: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯುಲ್ಪಟ್ಟು ವ್ಯಕ್ತಿಗೆ ಗಾಯ

0

ಪುತ್ತೂರು: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಕುಂಬ್ರದಲ್ಲಿ ನ.೫ರಂದು ಬೆಳಿಗ್ಗೆ ನಡೆದಿದೆ.

ಬೆಳ್ಳಾರೆಯಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಸುಲೈಮಾನ್(60.ವ)ರವರು ಕುಂಬ್ರ ಜಂಕ್ಷನ್ ಬಳಿ ಇಳಿಯುವ ಸಂದರ್ಭದಲ್ಲಿ ಬಸ್ಸಿನೊಳಗಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂದ್ದಾರೆ ಎಂದು ತಿಳಿದುಬಂದಿದೆ.

ಸುಲೈಮಾನ್‌ರವರು ಮಾಡಾವಿನಿಂದ ಕುಂಬ್ರಕ್ಕೆ ಬಸ್ ಹತ್ತಿದ್ದರು. ಕುಂಬ್ರ ತಲುಪುತ್ತಿದ್ದಂತೆ ಬಸ್‌ನಿಂದ ಇಳಿಯಲು ಬಸ್ಸಿನೊಳಗಡೆ ನಿಂತುಕೊಂಡಿದ್ದ ವೇಳೆ ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಸುಲೈಮಾನ್‌ರವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here