ನ.12 : ಮುಂಡೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಶೆಟ್ಟಿಯವರಿಗೆ ನಾಗರಿಕ ಸನ್ಮಾನ- ಪೂರ್ವಭಾವಿ ಸಭೆಯಲ್ಲಿ ತೀಮಾನ

0

ಪುತ್ತೂರು:2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕತ್ತಾರ್‌ನ ಉದ್ಯಮಿ, ಮುಂಡೂರು ನೇಸರ ಕಂಪ ರವಿ ಶೆಟ್ಟಿ ಮೂಡಂಬೈಲುರವರಿಗೆ ನಾಗರಿಕ ಸನ್ಮಾನ ನ.12ರಂದು ಮುಂಡೂರು ಕುಕ್ಕಿನಡ್ಕ ಶ್ರೀಸುಬ್ರಾಯ ದೇವಸ್ಥಾನದಲ್ಲಿ ನಡೆಸುವುದಾಗಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯು ನ.7ರಂದು ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿ ಹಾಗೂ ಅಭಿನಂದನಾ ಸಮಿತಿಗಳನ್ನು ರಚಿಸಿ, ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಾಗರಿಕ ಸನ್ಮಾನವು ಸಂಜೆ ನಡೆಯಲಿದ್ದು ಸಂಜೆ 4.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ರವಿ ಶೆಟ್ಟಿಯವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕಾರ್ಯಕ್ರಮ ನಡೆಯುವ ಮುಂಡೂರು ಕುಕ್ಕಿನಡ್ಕ ದೇವಸ್ಥಾನಕ್ಕೆ ಕರೆತರಲಾಗುವುದು. ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಯವರಿಂದ ಆಶೀರ್ವಚನ, ರಾಣಿ ಅಬ್ಬಕ್ಕ ತುಳು ಮ್ಯೂಸಿಯಂನ ಪ್ರೋ.ತುಕರಾಮ ಪೂಜಾರಿಯವರು ಅಭಿನಂದನಾ ಭಾಷಣ ನೆರವೇರಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಉಮೇಶ್ ನಾಡಾಜೆ, ಸಂಪ್ಯ ಅಕ್ಷಯ ಕಾಲೇಜಿನ ಚೆಯರ್‌ಮೆನ್ ಜಯಂತ ನಡುಬೈಲು, ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ತೆಗಳ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರುರವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಸನ್ಮಾನಿಸಲು ಅವಕಾಶವಿದೆ ಎಂದು ತೀರ್ಮಾನಿಸಲಾಗಿದೆ.

ಅಭಿನಂದನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.

ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ ತೌಡಂಜ, ರಜನಿ ಕಡ್ಯ, ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯಗುರು ಜಯಮಾಲ ವಿ.ಎನ್ ರತ್ನಾಕರ ರೈ ತಿಂಗಳಾಡಿ, ಶಿವನಾಥ ರೈ ಮೇಗಿನಗುತ್ತು, ಸುಧೀರ್ ಶೆಟ್ಟಿ ನೇಸರಕಂಪ, ಶ್ರೀಕಾಂತ್ ಆಚಾರ್ ಹಿಂದಾರು, ಮುಂಡೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ ಪೂಜಾರಿ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅನಿಲ್ ಕಣ್ಣಾರ್ನೂಜಿ, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಚಂದ್ರ ಗೌಡ ಕಡ್ಯ, ಬಾಲಕೃಷ್ಣ ಕಣ್ಣಾರಾಯ, ಸದಾಶಿವ ಗೌಡ, ಉದಯ ಗೌಡ ಪಜಿಮಣ್ಣು, ಶ್ರೀರಂಗ ಶಾಸ್ತ್ರಿ ಮಣಿಲ, ಪ್ರಸಾದ್ ಬೈಪಾಡಿತ್ತಾಯ, ಸೇಸಪ್ಪ ಆಚಾರ್ಯ, ಪುರುಷೋತ್ತಮ ಬಿ.ಕೆ., ಜಗದೀಶ ಕಲ್ಲಮ, ಧನಂಜಯ ಕಲ್ಲಮ, ನಿತಿನ್ ರೈ, ವಸಂತ ರೈ ಶಿಬರ, ಜಯಪ್ರಸಾದ್ ಮುಂಡೂರು, ರವಿಚಂದ್ರ ರೈ ಮುಂಡೂರು, ರಂಜಿತ್ ಹಿಂದಾರು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here