ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರತಿಕ್ಷ ಏನ್ ಶೆಣೈರವರಿಗೆ ಜಿಎಸ್‌ಬಿ ಸಮಾಜದಿಂದ ಅಭಿನಂದನೆ

0

ಪುತ್ತೂರು: ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರತಿಕ್ಷ ಏನ್ ಶೆಣೈ(ಎಂ. ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮೀ ಶೆಣೈ ದಂಪತಿ ಪುತ್ರಿ)ರವರ ಮನೆಗೆ ಜಿಎಸ್‌ಬಿ ಸಮಾಜದ ವತಿಯಿಂದ ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ದಾಮೋದರ ಭಂಡಾರಕಾರ್ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಕ್ಷ ಎನ್.ಶೆಣೈರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ನಾಗರಿಕ ಹಕ್ಕುಗಳ ಕಾರ್ಯಕರ್ತ ದಿನೇಶ್ ಭಟ್, ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ ಪೈ, ಉದ್ಯಮಿಗಳಾದ ಅವಿನಾಶ್ ಭಂಡಾರಕಾರ್, ಸುಧೀರ್ ಪ್ರಭು, ರವೀಂದ್ರ ಹೆಗ್ಡೆ, ದಾಮೋದರ ಹೆಗ್ಡೆ, ಪ್ರಶಾಂತ ಪ್ರಭು, ಎಂ. ಸುನಿಲ್ ಕಾಮತ್ ಉಪಸ್ಥಿತರಿದ್ದರು. ಪ್ರತಿಕ್ಷ ಏನ್ ಶೆಣೈ ಪೋಷಕರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here