ಸುದಾನ ಶಾಲೆ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ: ವಿಜೇತ ಮಾದರಿ ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ, ಪುತ್ತೂರು, ಇವುಗಳ ಸಹಯೋಗದಲ್ಲಿ ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸುದಾನ ಪ್ರೌಢಶಾಲೆಯಿಂದ ವೈಯಕ್ತಿಕ ವಿಭಾಗಕ್ಕೆ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭೌತಶಾಸ್ತ್ರ ವಿಷಯದಲ್ಲಿ ದೀಪಾಲಿ ಜೆ.ಕೆ (9ನೇ), ಬಯೋಸೈನ್ಸ್, ಬಯೋಕೆಮಿಸ್ಟ್ರಿ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿ ರೀಶೆಲ್‌ಎಲ್ಸಾ ಬೆನ್ನಿ (9ನೇ), ರಾಸಾಯನಶಾಸ್ತ್ರ ವಿಷಯದಲ್ಲಿ ಮಹಮ್ಮದ್‌ಜಲಾಲ್ (9ನೇ), ತಮ್ಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು. ಸಮೂಹ ವಿಭಾಗದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಅಕ್ಷತ್ ಕುಮಾರ್ (9ನೇ), ತನೀಶ್ (9ನೇ), ಗಣಿತ ವಿಷಯದಲ್ಲಿ ಸಾನ್ವಿ ಜೆ.ಎಸ್. (9ನೇ) ಕೆ. ಮುಕ್ತಾ ರೈ (9ನೇ) ಮತ್ತು ಭೂಮಿ ಮತ್ತು ಬಾಹ್ಯಾಕಾಶ ವಿಷಯದಲ್ಲಿ ಆರ್. ರೋಹಿತ್ ಕುಮಾರ್ (9ನೇ) ಮತ್ತು ಬಿ. ಸಂಜಯ್ (9ನೇ) ತಮ್ಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು.

ಈ ಸ್ಪರ್ಧೆಯಲ್ಲಿ ರೀಶೆಲ್‌ಎಲ್ಸಾ ಬೆನ್ನಿ ಪ್ರದರ್ಶಿಸಿದ ’ಬಯೋಸೈನ್ಸ್, ಬಯೋಕೆಮಿಸ್ಟ್ರಿ ಮತ್ತು ಪರಿಸರ ವಿಜ್ಞಾನ ವಿಷಯದ ’ಇಂಟಿಗ್ರೇಟೆಡ್ ಸರ್‌ಕ್ಯುಲಾರ್ ಪಿರಮಿಡ್ ಫಾರ್ಮಿಂಗ್’ (Integrated Circular Pyramid Farming)ವಿಜ್ಞಾನ ಮಾದರಿಯು ತೀರ್ಪುಗಾರರ ಮೆಚ್ಚುಗೆಗಳಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.

ಜಿಲ್ಲಾಮಟ್ಟದ ಸ್ಪರ್ಧೆಯು ನ. 10ರಂದು ಬಂಟ್ವಾಳದ ಕಾರ್ಮೆಲ್‌ಗರ್ಲ್ಸ್ ಹೈಸ್ಕೂಲ್‌ನಲ್ಲಿ ಜರಗಲಿದೆ. ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳಿಗೆ ವಿಜ್ಞಾನ ಶಿಕ್ಞಕಿಯರಾದ ರೇಖಾಮಣಿ ಮತ್ತು ಶಾರದಾ ಮಾರ್ಗದರ್ಶನ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here