ಪುತ್ತೂರು: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಮಾರು 40 ವರುಷಗಳ ಅನುಭವದೊಡನೆ ,ಇಂಟೀರಿಯರ್ ಹಾಗೂ ಎಕ್ಸ್ಟೀರಿಯರ್ ಕೆಲಸವನ್ನೂ ಕೂಡ ಚೆಂದವಾಗಿ ಮಾಡಿಕೊಡಬಲ್ಲ , ಎಂ. ವಿ. ಭಟ್ ಇವರು ಹುಟ್ಟುಹಾಕಿರುವ ಮೂಲತಃ ಮುಂಬೈ ದಾದರ್ ನಲ್ಲಿ ಕಾರ್ಯಾಚರಿಸುತ್ತಿರುವ ಹೆಸರಾಂತ ಸಂಸ್ಥೆಯ, ಸಹಸಂಸ್ಥೆ ಎಂ.ವಿ .ಭಟ್ ರವರ ಪುತ್ರ ದಿನೇಶ್ ವಿ ಭಟ್ 3 ವರುಷಗಳ ಹಿಂದೆ ಪುತ್ತೂರಿನಲ್ಲಿ ಪ್ರಾರಂಭಿಸಿದ ಡಿ.ಬಿ.ಸಿ.(ಡಿಝೈನ್ ,ಬಿಲ್ಡ್ ,ಕನ್ ಸ್ಸಲ್ಟ್) ಮುಖ್ಯರಸ್ತೆ , ಹೆಗ್ಡೆ ಆರ್ಕೆಡ್ ನೆಲ ಮಹಡಿಯಲ್ಲಿ ಸೇವೆ ಸಲ್ಲಿಸಿಸುತ್ತಿದ್ದು , ಇದೀಗ 4 ರ ಸಂಭ್ರಮದೊತ್ತಿನಲ್ಲಿ ಮರುವಿನ್ಯಾಸಗೊಂಡು , ನ. 9 ರಂದು ಮರು ಶುಭಾರಂಭಗೊಂಡಿತು.
ಮಾಲಕರ ತಂದೆ- ತಾಯಿ ಎಂ ವಿ ಭಟ್ ,ಲಕ್ಷ್ಮೀ ವಿ ಭಟ್ ದಂಪತಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶ್ರೇಯೋಭಿವೃದ್ಧಿಗೆ ಹರಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಅಧ್ಯಕ್ಷ ಉಮನಾಥ್ ಪಿ.ಬಿ. ಮಾತನಾಡಿ ,
ವಂಶಪರಂಪರೆಯಾಗಿ ಈ ಉದ್ಯಮವೂ ನಡೆದು ಬಂದಿದೆ. ಹೆಸರಾಂತ ಕರ್ಣಾಟಕ ಬ್ಯಾಂಕ್ ನ ಅತೀ ಹೆಚ್ಚು ಶಾಖೆಗಳ ಕಾಮಗಾರಿಗಳೆಲ್ಲಾ ಎಂ.ವಿ.ಭಟ್ ರವರ ನೇತೃತ್ವದಲ್ಲೇ ಸಾಗಿರುವಂಥದ್ದು ,ಇದೀಗ ಪುತ್ತೂರಲ್ಲೂ ಡಿ.ಬಿ.ಸಿ. ತನ್ನ ಛಾಪು ಮೂಡಿಸಿ ಅಭಿವೃದ್ಧಿ ಹೊಂದಲಿಯೆಂದು ಹಾರೈಸಿದರು.
ಪುತ್ತೂರು ಸಿವಿಲ್ ಎಂಜಿನೀಯರ್ಸ್ ಒಕ್ಕೂಟ ಇದರ ಅಧ್ಯಕ್ಷ ಅಕ್ಷಯ್ ಎಸ್.ಕೆ. ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಒಂದು ವಿಶೇಷತೆಯಿದ್ದರೆ, ಆ ಕ್ಷೇತ್ರವು ಖಂಡಿತ ಬೆಳೆಯಬಹುದು. ಇಲ್ಲಿ ಯಾರೊಂದಿಗೂ ಪೈಪೋಟಿ ನೀಡದೆ, ಒಗ್ಗೂಡುವಿಕೆ ಹಾಗೂ ಸಹಕಾರದಿಂದ ಜಯ ಸಾಧ್ಯವೆಂದು ಹೇಳಿ ಹಾರೈಸಿದರು.
ಪುತ್ತೂರು ಸಿವಿಲ್ ಎಂಜಿನೀಯರ್ಸ್ ಒಕ್ಕೂಟ ಇದರ ಮಾಜಿ ಅಧ್ಯಕ್ಷ ಹರೀಶ್ ಪುತ್ತೂರಾಯ ಸಂಧರ್ಬೊಚಿತ ಮಾತನಾಡಿ ಹಾರೈಸಿದರು.
ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ರಾಘವೇಂದ್ರ ಭಟ್, ಕಾವೇರಿ ಎಂಟರ್ ಪ್ರೈಸಸ್ ಮಾಲಕ ಶ್ರೀಕಾಂತ್ ಕೊಳತ್ತಾಯ ,ಇ.ಎನ್.ಟಿ.ಸ್ಪೆಶಲಿಸ್ಟ್ ಡಾ. ಈಶ್ವರ್ ಪ್ರಕಾಶ್, ಕೃಷ್ಣ ಮರ್ಚಂಟ್ ಮಾಲಕ ನಿತ್ಯಾನಂದ, ನರೇಂದ್ರ ಪೆಜಕ್ಕಳ ಮೈಸೂರು, ಮಾನಸ ಅಪ್ಟಿಕಲ್ಸ್ ಮಾಲಕ ಕೇಶವ ಮೂರ್ತಿ, ರೋಟೆರಿಯನ್ ಜಯ್ ರಾಜ್ ಭಂಡಾರಿ, ಸುಧಾ ಇಲೆಕ್ಟ್ರಿಕಲ್ಸ್ ಮಾಲಕ ಗುರುರಾಜ್ ,ಮಹಾಲಿಂಗೇಶ್ವರ ಪ್ಲೈವುಡ್ ಮಾಲಕ ಜಗನ್ನಾಥ್ ಗೌಡ, ಮಾಲಕರ ಸಹೋದರ ಧನ್ಯ ವಿ ಭಟ್ ಮತ್ತು ಮೂಕಾಂಬಿಕಾ ಡಿ ಭಟ್, ಚಿಕ್ಕಪ್ಪ ಈಶ್ವರ್ ಭಟ್ ಗೂಡಿನಮಜಲು ಸಹಿತ ಮತ್ತಿರರು ಈ ಶುಭವೇಳೆ ಹಾಜರಿದ್ದು, ಹಾರೈಸಿದರು.ಮಾಲಕ ದಿನೇಶ್ ವಿ ಭಟ್ ಮಾತನಾಡಿ, ಮುಖ್ಯವಾಗಿ ಮಡಚುವ ಪೀಠೋಪಕರಣಗಳ ತಯಾರಿಕೆಯಲ್ಲಿ (ಸ್ಪೆಶಲಿಸ್ಟ್ ಇನ್ ಫೋಲ್ಡಿಂಗ್ ಫರ್ನಿಚರ್ ). ಅತೀ ಹೆಚ್ಚೂ ಅನುಭವದ ಜೊತೆ ಸಿವಿಲ್ ಎಂಜೀನಿಯರ್ಸ್, ಇಂಟೀರಿಯರ್ ಹಾಗೂ ಎಕ್ಸ್ಟೀರಿಯರ್ ಡೆಕೊರೇಟರ್ಸ್, ಕಾರ್ಪೆಂಟರ್ ವರ್ಕ್, ಎ.ಸಿ.ಪಿ.ಕೆಲಸಗಳನ್ನೂ ನುರಿತ ಕಾರ್ಮಿಕ ವರ್ಗದಿಂದ ತ್ವರಿತ ರೀತಿಯಲ್ಲಿ ಅತೀ ನಾಜೂಕಾಗಿ ನಿರ್ವಹಿಸುತ್ತೇವೆ ,ನಿಮ್ಮೆಲ್ಲರ ಸಹಕಾರ ,ಬೆಂಬಲ ನಮಗೆ ರಕ್ಷೆಯೆಂದು ಹೇಳಿ , ವಂದಿಸಿದರು.
ಲಕ್ಷ್ಮೀ ಡಿ ಭಟ್ ಹಾಗೂ ಪ್ರಸನ್ನಾ ಡಿ ಭಟ್ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ,ಸತ್ಕರಿಸಿದರು.