ಕಾಣಿಯೂರು: ದ.ಕ ಜಿಲ್ಲಾ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಐಸಿಸಿಒಎ ಸಂಪನ್ಮೂಲ ಸಂಸ್ಥೆ ಬೆಂಗಳೂರು, ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ವತಿಯಿಂದ ಬೆಳಂದೂರು ಗ್ರಾಮ ಪಂಚಾಯತ್, ಕಾಣಿಯೂರು ಗ್ರಾಮ ಪಂಚಾಯತ್, ಸವಣೂರು ಗ್ರಾಮ ಪಂಚಾಯತ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇವುಗಳ ಆಶ್ರಯದಲ್ಲಿ ರೈತ ಉತ್ಪಾದಕ ಪರಿಕಲ್ಪನೆ ಮತ್ತು ವ್ಯಾಪಾರ ಅಭಿವೃದ್ಧಿ ಹಾಗೂ ಆಹಾರ ಉತ್ಪಾದನೆಗಳ ತರಬೇತಿ ಶಿಬಿರವು ಬರೆಪ್ಪಾಡಿ ದ್ವಾಕ್ರಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಹಿಸಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಈ ರೀತಿಯ ಕಾರ್ಯಗಾರಗಳು ಪೂರಕವಾಗಲಿದೆ ಎಂದರು. ಕಾರ್ಯಕ್ರಮವನ್ನು ಉದ್ಘಟಿಸಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ರೈತರು ಸ್ವ ಉದ್ಯೋಗ ಮತ್ತು ಮಿಶ್ರ ಕೃಷಿಯ ಮೂಲ ಸ್ವಾವಲಂಬಿಗಳಾಗಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಪಿಎಂಎಫ್ಇ ಸ್ಕಿಮ್ನ ಡಿಆರ್ಪಿ ಸತೀಶ್ ಮಾಬೆನ್ ಮತ್ತು ಸುಳ್ಯ ರೈತ ಉತ್ಪದಕರ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಮಾಹಿತಿ ನೀಡಿದರು. ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಬೆಳಂದೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಗತಿ ಸಂಜೀವಿನಿ ಒಕ್ಕೂಟ ಬೆಳಂದೂರು ಗ್ರಾ.ಪಂ., ಉಜ್ವಲ ಸಂಜೀವಿನಿ ಒಕ್ಕೂಟ ಕಾಣಿಯೂರು ಗ್ರಾ.ಪಂ. ರೋಟರಿ ಸಮುದಾಯ ದಳ ಸವಣೂರು ಸಹಕಾರ ನೀಡಿದರು. ನಿರ್ದೇಶಕರಾದ ಯಶವಂತ್ ಕಳುವಾಜೆ, ಗಂಗಾಧರ ಪೆರಿಯಡ್ಕ, ಶಿವರಾಮ ಗೌಡ ದೋಳ್ಪಾಡಿ, ಸದಾನಂದ ಸೌತೆಮಾರು, ಪ್ರಗತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೌರಿ ಸಂಜೀವ, ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಚಿತ್ರಾ ಕಟ್ಟತ್ತಾರು, ಸವಣೂರು ಶ್ರೀರಾಮ ಸಂಜೀವಿನಿ ಒಕ್ಕೂಟದ ಗೀತಾ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ನಿರ್ಮಲ ಕೇಶವ ಗೌಡ ಅಮೈ ಮತ್ತು ಪ್ರಗತಿ ಸಂಜೀವಿನಿ ಒಕ್ಕೂಟದ ಸವಿತಾ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಸ್ವಾಗತಿಸಿ, ನಿರ್ದೇಶಕರಾದ ಶ್ರೀಧರ ಸುಣ್ಣಾಜೆ ವಂದಿಸಿದರು. ನಿರ್ದೇಶಕ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು. ಎಲ್ಆರ್ಪಿ ರಾಜೇಶ್, ದಿಇಓ ಅಶೋಕ್ ಸಿಇಓ ಡಿಕೇಶ್ ಸಹಕರಿಸಿದರು.