ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆ ‘ವಿದ್ಯಾಮಾತಾ ಅಕಾಡೆಮಿ’ಯು ಕರಾವಳಿ ಭಾಗದಲ್ಲಿ ನಿರಂತರವಾಗಿ ವಿವಿಧ ನೇಮಕಾತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದು, ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ “ಅಗ್ನಿಪಥ್” ಸೇನಾ ನೇಮಕಾತಿಗೆ ಪುತ್ತೂರಿನಲ್ಲಿ ದೈಹಿಕ ಕ್ಷಮತೆಯ ತರಬೇತಿಯನ್ನು ನೀಡುವುದರ ಮೂಲಕ ನೂರಾರು ವಿದ್ಯಾರ್ಥಿಗಳು ಅಗ್ನಿಪಥ್ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿತ್ತು. ಅಲ್ಲದೇ ಹಾವೇರಿಯಲ್ಲಿ ನಡೆದ ರ್ಯಾಲಿಗೆ ಪುತ್ತೂರಿನ ಶಾಸಕರಾದ ‘ಶ್ರೀ ಸಂಜೀವ ಮಠಂದೂರು’ ರವರು ಉಚಿತ ಬಸ್ ವ್ಯವಸ್ಥೆಯನ್ನು ಮಾಡಿ ವಿದ್ಯಾಮಾತಾದ ಪ್ರಯತ್ನಕ್ಕೆ ಸಹಕಾರವನ್ನು ನೀಡಿದ್ದರು. ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮಂಗಳೂರು ಭಾಗದ ಶಾಸಕರುಗಳು ಕೂಡ ಉಚಿತ ಬಸ್ ವ್ಯವಸ್ಥೆಯನ್ನು ಮಾಡುವುದರ ಮೂಲಕ ಅಗ್ನಿಪಥ್ ರ್ಯಾಲಿಯಲ್ಲಿ ಕರಾವಳಿಯ ನೂರಾರು ಯುವಕರು ಪಾಲ್ಗೊಳ್ಳುವಂತೆ ಜಾಗೃತಿ ಮೂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ಅಗ್ನಿಪಥ್ ಸೇನಾ ರ್ಯಾಲಿಯಲ್ಲಿ ಉತ್ತೀರ್ಣರಾಗಿರುವ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಭಾಗದ ಒಟ್ಟು 18 ಅಭ್ಯರ್ಥಿಗಳಿಗೆ ಅಂತಿಮ ಹಂತದ ಲಿಖಿತ ಪರೀಕ್ಷೆಯ ತರಬೇತಿಯನ್ನು ಉಚಿತವಾಗಿ ‘ವಿದ್ಯಾಮಾತಾ ಅಕಾಡೆಮಿ’ಯು ನೀಡುತ್ತಿದ್ದು, ನವೆಂಬರ್ 13 ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಒಂದು ವಾರದ ಆಹೋರಾತ್ರಿ ಸರಣಿ ತರಬೇತಿಯನ್ನು ನೀಡುತ್ತಿದೆ. ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರೇ ಇಲ್ಲ ಎನ್ನುವ ಕೂಗಿನ ಮಧ್ಯೆ ವಿದ್ಯಾಮಾತಾ ಅಕಾಡೆಮಿಯ ಈ ಪ್ರಯತ್ನವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ.
ಹಾಸನದಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಉತ್ತೀರ್ಣರಾಗಿದ್ದ ವೈಭವ್ ನಾಣಯ್ಯ ‘ವಿದ್ಯಾಮಾತಾ ಅಕಾಡೆಮಿಯ’ಲ್ಲಿ ತರಬೇತಿ ಪಡೆದು, ಲಿಖಿತ ಪರೀಕ್ಷೆಯಲ್ಲಿ ಪಾಸಾಗಿ ಅಗ್ನಿವೀರ ಹುದ್ದೆಗೆ ಆಯ್ಕೆಯಾಗುವುದರ ಮೂಲಕ ಅಗ್ನಿಪಥ್ ಯೋಜನೆಗೆ ವಿದ್ಯಾಮಾತಾ ಅಕಾಡೆಮಿಯು ಪ್ರಥಮ ಕೊಡುಗೆಯನ್ನು ನೀಡಿದೆ. ನವೆಂಬರ್ 13 ರಂದು ವಿದ್ಯಾಮಾತಾ ಅಕಾಡೆಮಿಯ 15 ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆಯಲಿದ್ದು, ಉತ್ತಮ ಫಲಿತಾಂಶವನ್ನು ಪಡೆಯಲು ಒಂದು ವಾರದ ರಾತ್ರಿ ಹಗಲೆನ್ನದೇ ಸರಣಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್,ಎಪಿಯಂಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201 ಫೋನ್ ನಂ. 9148935808 / 9620468869 ನ್ನು ಸಂಪರ್ಕಿಸಬಹುದು.