ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 14ರ ವಯೋಮಾನದ ವಿಭಾಗವು ದ್ವಿತಿಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಥಮಿಕ ವಿಭಾಗದಲ್ಲಿ ಸುಹಾನಿ ಎಂ. ಗುಂಡು ಎಸೆತ (ಪ್ರ), ಚಕ್ರ ಎಸೆತ (ದ್ವಿ), ಅಭೀಕ್ಷ ಎಂ. ಆರ್. ಎತ್ತರ ಜಿಗಿತ (ದ್ವಿ), ಉದ್ದ ಜಿಗಿತ (ದ್ವಿ), 4*100 ಮೀ. ರಿಲೇ (ತೃ), ಸುತ ಡಿ.ಬಿ. ಉದ್ದ ಜಿಗಿತ (ದ್ವಿ), 4*100 ಮೀ ರಿಲೇ (ದ್ವಿ), ಪ್ರಕೃತಿ ಗುಂಡು ಎಸೆತ (ತೃ), ಅನನ್ಯ 4*100 ರಿಲೇ (ತೃ), ಧನ್ಯಶ್ರೀ 4*100 ರಿಲೇ (ತೃ), ಪ್ರೀತಮ್ ಚಕ್ರ ಎಸೆತ (ದ್ವಿ).ಪ್ರೌಢ ಶಾಲಾ ವಿಭಾಗ (8ನೇ ತರಗತಿ) ದೀಪಿಕಾ ಸಿ.ಪಿ. ಎತ್ತರ ಜಿಗಿತ (ಪ್ರ), 600 ಮೀ. (ದ್ವಿ), 4*100 ರಿಲೇ (ದ್ವಿ), ಅಕ್ಷರ ಎಮ್. ಎಸ್. ಉದ್ದ ಜಿಗಿತ (ದ್ವಿ), 100 ಮೀ. (ತೃ), 4*100 ರಿಲೇ (ದ್ವಿ), ನಿಖಿತಾ ಎತ್ತರ ಜಿಗಿತ (ದ್ವಿ), ಚಕ್ರ ಎಸೆತ (ದ್ವಿ), 4*100 ರಿಲೇ (ದ್ವಿ), ರೇಶ್ಮಾ ಕೆ 4*100 ರಿಲೇ (ದ್ವಿ).
ಪ್ರೌಢ ಶಾಲಾ ವಿಭಾಗದಲ್ಲಿ ಇಂಚರ ಎಂ.ಎಸ್. ಚಕ್ರ ಎಸೆತ (ಪ್ರ), ಗುಂಡು ಎಸೆತ (ದ್ವಿ), ಹಿತೈಶಿ ಈಟಿ ಎಸೆತ (ದ್ವಿ), ರಕ್ಷ ಎತ್ತರ ಜಿಗಿತ (ದ್ವಿ), ಪ್ರಜ್ವಲ್ ಈಟಿ ಎಸೆತ (ದ್ವಿ) ಸ್ಥಾನವನ್ನು ಪಡೆದಿರುತ್ತಾರೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.