ಹಲ್ಲೆ, ಕೊಲೆ ಮುಂತಾದ ದುಷ್ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿರುವ ಬಿಜೆಪಿ ಜಿಲ್ಲೆಯ ಜನರ ಶಾಂತಿ, ನೆಮ್ಮದಿ ಹಾಳು ಮಾಡುತ್ತಿದೆ-ಎಂ.ಬಿ ವಿಶ್ವನಾಥ ರೈ ಆರೋಪ
ಪುತ್ತೂರು : ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರು ಇದ್ದೂ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯ ಮಾಡದೆ, ಕೇವಲ ಕೋಮು ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ಪಕ್ಷ ಧರ್ಮ -ಧರ್ಮಗಳ ನಡುವೆ ಕಂದಕ ನಿರ್ಮಿಸಿ ಅದರಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ, ಯುವಕರ ಮನಸ್ಸಿನಲ್ಲಿ ಕೋಮು ಭಾವನೆ ತುಂಬಿಸಿ ಕ್ರಿಮಿನಲ್ ಚಟುವಟಿಕೆಗೆ ಬಳಸಿಕೊಂಡು ಆ ಮೂಲಕ ಹಲ್ಲೆ, ಕೊಲೆ ಕೃತ್ಯಗಳಿಗೆ ಕುಮ್ಮಕ್ಕು ನೀಡಿ ಜಿಲ್ಲೆಯ ಜನರ ಶಾಂತಿ, ನೆಮ್ಮದಿ ಹಾಳು ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈಯವರು ಆರೋಪಿಸಿದರು.
ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜನರಿಗೆ ಮಾರಕವಾದ ಬಿಜೆಪಿ ಪಕ್ಷವನ್ನು ಸೋಲಿಸಿ ಮನೆಗೆ ಕಳುಹಿಸಲು ಕಾರ್ಯಕರ್ತರು ಇಂದಿನಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದು ಕರೆ ನೀಡಿದರು,
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನಾವು ಒಗ್ಗಟ್ಟಾಗಿ ಅವರು ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಮಾತನಾಡಿ ಬಿಜೆಪಿ ಪಕ್ಷದವರಿಗೆ ಕೋರ್ಟ್, ಕಾನೂನು ಎಂಬುದು ಏನು ಎಂದು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ, ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಯ ಬಗ್ಗೆ ಹಾಕಲಾಗುವ ಬ್ಯಾನರ್ -ೆ್ಲಕ್ಸ್ನಲ್ಲಿ ಯಾವುದೇ ಜನ ಪ್ರತಿನಿಽಗಳು ತನ್ನ ಅನುದಾನವೆಂದು ಹೆಸರು, ಫೊಟೋ ಅಳವಡಿಸಬಾರದು. ಇದಕ್ಕೆ ತಪ್ಪಿದಲ್ಲಿ ಬ್ಯಾನರ್ ಅಳವಡಿಸಿದವರ ವಿರುದ್ಧ ಸ್ಥಳೀಯ ಆಡಳಿತದ ಮುಖ್ಯಸ್ಥರು ಕ್ರಿಮಿನಲ್ ಮೊಕದ್ದಮೆ ಹೂಡಬೇಕು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇಲಾಖೆಗಳು ಸುಪ್ರೀಂ ಕೋರ್ಟ್ ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಂಬಂಧ ಪಟ್ಟ ಎಲ್ಲರಿಗೂ ಸರಕಾರ ಸುತ್ತೋಲೆ ಹೊರಡಿಸಿದೆ. ಆದರೆ ಪುತ್ತೂರಿನಲ್ಲಿ ಅಲ್ಲಲ್ಲಿ ಸಂಸದರ, ಶಾಸಕರ ನಗರಸಭಾ ಅಧ್ಯಕ್ಷರ ಹಾಗೂ ಸದಸ್ಯರ ಫೊಟೋ ಹಾಗೂ ಕಾಮಗಾರಿ, ಹೆಸರು, ಅನುದಾನದ ಹೆಸರು ಹಾಕಿ ಬ್ಯಾನರ್ ಫ್ಲೆಕ್ಸ್ ಅಳವಡಿಸಿ ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ನಗರಸಭೆ ಹಾಗೂ ಪಂಚಾಯತ್ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಕುಳಿತು ಕರ್ತವ್ಯ ಲೋಪ ಎಸಗಿರುತ್ತಾರೆ ಎಂದು ಆರೋಪಿಸಿದರಲ್ಲದೆ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಂಡು ಇಂತಹ ಬ್ಯಾನರ್, ಫ್ಲೆಕ್ಸ್ ಗಳನ್ನು ಕೂಡಲೇ ತೆರವುಗೊಳಿಸಲು ಅಽಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಅಂತಹ ಅಽಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗ ಬೇಕಾದೀತು ಎಂದು ಎಚ್ಚರಿಸಿದರು, ಯಾವ ಕಡೆ ಈ ರೀತಿ ಬ್ಯಾನರ್ ಅಳವಡಿಸಿದ್ದಾರೋ ಅದರ ಫೊಟೋ ತೆಗೆದು ನನಗೆ ಕಳುಹಿಸಿಕೊಡಿ ಎಂದು ಅಲಿಯವರು ಕಾರ್ಯಕರ್ತರಿಗೆ ಮನವಿ ಮಾಡಿದರು. ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ.ಸೋಜ, ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ನೆಕ್ಕಿಲು, ಪುತ್ತೂರು ಘಟಕದ ಅಧ್ಯಕ್ಷ ಶ್ರವಣ್ ಸಿಕ್ವೇರಾರವರು ಮಾತನಾಡಿ ತಮ್ಮ ಘಟಕದ ವತಿಯಿಂದ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಎಸ್‌ಸಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಎಸ್‌ಟಿ ಘಟಕದ ಅಧ್ಯಕ್ಷ ಕೇಶವ ಪಡೀಲ್‌ರವರು ತಮ್ಮ ಗ್ರಾಮದಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಮನೋಹರ್ ರೈ ಎಂಡೆಸಾಗು, ಶಶಿಕಿರಣ್ ರೈ ನೂಜಿಬೈಲು, ಪುರಂದರ ರೈ ಕೋರಿಕ್ಕಾರು, ಎನ್ ಮೂಸಾನ್ ಕರ್ನೂರು, ಮಹಾಬಲ ರೈ ಒಳತ್ತಡ್ಕ, ಜಯಂತಿ ಬಲ್ನಾಡು, ಮೌರೀಸ್ ಮಸ್ಕರೇನಸ್, ಮನಮೋಹನ ರೈ, ಇಕ್ಬಾಲ್ ಹುಸೈನ್, ಸುಪ್ರೀತ್ ಕಣ್ಣರಾಯ, ಡಿ.ಕೆ.ಅಬ್ದುಲ್ ರಹಿಮಾನ್, ಜಯಾನಂದ ಕುರಿಯ, ಅಬ್ದುಲ್ ರಝಾಕ್ ಮುಕ್ವೆ, ಜಯಪ್ರಕಾಶ್, ದಿನೇಶ್ ಪಿ.ವಿ., ರೋಶನ್ ರೈ ಬನ್ನೂರು, ಚಂದ್ರಹಾಸ ಶೆಟ್ಟಿ, ಸೂಫಿ ಪಡೀಲ್, ಹನೀಫ್ ಮಾಡಾವು, ಹಾರೀಸ್ ಸಂಟ್ಯಾರು, ಐತ್ತಪ್ಪ ನಾಯ್ಕ, ಅಬ್ದುಲ್ ಖಾದರ್ ಮಾಡಾವು, ಹಸೈನಾರ್ ಅರಿಕ್ಕಿಲ, ಭಾಸ್ಕರ ಗೌಡ ಕೋಡಿಂಬಾಳ, ಭಾಸ್ಕರ ಕರ್ಕೆರ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಾಮಾಜಿಕ ಜಾಲತಾಣದ ಸಿದ್ದೀಕ್ ಸುಲ್ತಾನ್, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೋಟ್ಯಾನ್, ಚಿರಾಗ್ ರೈ ಮೇಗಿನಗುತ್ತು, ರಂಜಿತ್ ಬಂಗೇರ, ರಾಮ ಮೇನಾಲ, ಗಿರೀಶ ಗೊಲ್ವಲ್ಕಾರ್, ಶಿವರಾಮ ಆಳ್ವ, ರಾಮಚಂದ್ರ, ಕೃಷ್ಣಪ್ರಸಾದ ಆಳ್ವ, ಎಂ.ಬಿ.ಇಬ್ರಾಹಿಂ, ಕೆ.ಎ.ಅಲಿ, ಶೀನಪ್ಪ ನಾಯ್ಕ, ಪ್ರಕಾಶ್ ಪುರುಷರಕಟ್ಟೆ, ಆದಂ ಕಲ್ಲರ್ಪೆ, ಪವಿತ್ರ, ಸುಮಿತ್ರ ಕೆ.,ರವರು ಮಾತನಾಡಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.