ಮಾಂಡವಿ ಮೋಟರ್ಸ್ ವತಿಯಿಂದ “ನೇತ್ರ” ನಾಟಕ ರೂಪಕ ನೇತ್ರದಾನದ ಬಗ್ಗೆ ಜಾಗೃತಿ ಅಭಿಯಾನ

0

ಪುತ್ತೂರು : ಕರ್ನಾಟಕ ಪ್ರಥಮ ಮಾರುತಿ ಸುಜುಕಿ ಕಾರ್ ಡೀಲರ್ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ 38 ವರ್ಷಗಳಿಂದ ಮಾರುತಿ ಕಾರುಗಳ ಮಾರಾಟ ಹಾಗೂ ಸೇವೆಯ ಮುಖಾಂತರ ಲಕ್ಷಾಂತರ ಗ್ರಾಹಕರ ಮನೆಮಾತಾಗಿದ್ದು ಹಲವಾರು ವರ್ಷಗಳಿಂದ ಸಂಸ್ಥೆಯು ಸಮಾಜಸೇವೆಯಲ್ಲಿ ಸಹ ತನ್ನನ್ನು ತಾನು ತೊಡಗಿಸಿಕೊಂಡಿದೆ. ರಕ್ತದಾನ ಶಿಬಿರ, ಉಚಿತ ಕಣ್ಣಿನ ಪರೀಕ್ಷೆ, ಆಸ್ಪತ್ರೆಗೆ ಆಂಬ್ಯೂಲೆಸ್ನ್ ಕೊಡುಗೆ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ ಪ್ರತೀ ಆಯುಧ ಪೂಜೆಗೆ ಜನಜಾಗೃತಿ ಮೂಡಿಸುವ ಸಲುವಾಗಿರುವ ನಾಟಕಗಳನ್ನು ಸಿಬ್ಬಂದಿ ವರ್ಗದ ಮುಖಾಂತರ ಅಭಿನಯಿಸಿ ವೇದಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪಸರಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ.

2022 ಸಾಲಿನ ಆಯುಧ ಪೂಜೆಯ ಪ್ರಯುಕ್ತ “ನೇತ್ರಾ” ಎಂಬ ನಾಟಕದ ರೂಪಕವನ್ನು ಸುಮಾರು 39 ಜನ ಸಿಬ್ಬಂದಿಗಳು ಸೇರಿ ಅಭಿನಯಿಸಿದರು. ಇದು ಮನರಂಜನೆ ಮಾತ್ರವಲ್ಲದೆ, ‌ನೇತ್ರದಾನದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಿದೆ. ಈ ನಾಟಕವನ್ನು ಮಾಂಡೋವಿ ಮೋಟರ್ಸ್ ಅಕೌಂಟ್ಸ್ ವಿಭಾಗದ AGM  ಅಶೋಕ್ ಪಂಜಿಗ ಅವರು ರಚಿಸಿ ಆಕ್ಸಸರಿಸ್ ವಿಭಾಗದ ಪ್ರಭಂದಕರಾದ  ಪ್ರದೀಪ್ ಅವರು ನಿರ್ದೇಶಿಸಿದ್ದಾರೆ.

ಅ. 22 ರಂದು ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ನುರಿತ ವೈದರುಗಳ ಸಹಯೋಗದೊಂದಿಗೆ ಸುಮಾರು 200 ಉದ್ಯೋಗಿಗಳಿಗೆ ಉಚಿತ ಆರೋಗ್ಯ ಹಾಗೂ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸುಮಾರು 82 ಮಂದಿ ನೇತ್ರದಾನದ ಒಲವನ್ನು ತೋರಿದರು. ಕಾರ್ಯಕ್ರಮದಲ್ಲಿ ಮಾಂಡೋವಿ ಮೋಟರ್ಸ್ ಮಂಗಳೂರು ಸಂಸ್ಥೆಯ ಅಸೋಸಿಯೇಟೆಡ್ ವೈಸ್ ಪ್ರೆಸಿಡೆಂಟ್  ಪಾಶ್ವನಾಥ್ ಜೈನ್, ಸೇಲ್ಸ್ ವಿಭಾಗದ ಡಿಜಿಎಂಶಶಿಧರ್ .ಟಿ, AGM  ಅಶೋಕ್ ಪಂಜಿಗ, HR Manager ಶಿವಪ್ರಸಾದ್, ದೀಕ್ಷಿತ್, ಮುರಳಿ, ಸೂರಜ್, ಡೆನ್ಜಿಲ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here