ಪುತ್ತೂರಿನಲ್ಲಿ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ: ಠೇವಣಿ ಪತ್ರ, ಉಳಿತಾಯ ಖಾತೆ ಪುಸ್ತಕ ಸಾಂಕೇತಿಕ ವಿತರಣೆ

0

ಪುತ್ತೂರು: ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 11ನೇ ಶಾಖೆ ಪುತ್ತೂರಿನ ಟೌನ್ ಬ್ಯಾಂಕ್ ಬಳಿಯ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ನೆಲ ಮಹಡಿಯಲ್ಲಿ ನ. 11ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಂಡಿತ್ತು.

ಮಹಾವೀರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಪಿ ಪಿ ಹೆಗ್ಡೆ ಅಧ್ಯಕ್ಷತೆ ವಹಿಸಿ 11 ನೇ ಶಾಖೆಯನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಗಣಕಯಂತ್ರವನ್ನು ಉದ್ಘಾಟಿಸಿದರು. ಬಳಿಕ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಗ್ರಾಹಕನು ಅಭಿವೃದ್ಧಿ, ಶ್ರೀಮಂತಗೊಳ್ಳಬೇಕೆಂಬ ಉದ್ದೇಶ ನಮ್ಮದು:
ಮಹಾವೀರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಪಿ ಪಿ ಹೆಗ್ಡೆ ಅಧ್ಯಕ್ಷತೆ ವಹಿಸಿ ಶಾಖೆಯನ್ನು ಮತ್ತು ಸಮಾರಂಭವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆತ್ಮಕಲ್ಯಾಣದ ಮೂಲಕ ಮಾನವ ಜನಾಂಗದ ಕಲ್ಯಾಣ ಆಗಬೇಕೆಂದು ಮಹಾವೀರ ಸ್ವಾಮಿ ಸಿದ್ಧಾಂತ. ಹಾಗಾಗಿ ಅವರ ಸಿದ್ಧಾಂತವನ್ನು ಅನುಸರಿಕೊಂಡು ಬಂದ ಸಂಸ್ಥೆ ಎಲ್ಲರ ಏಳಿಗೆ ಆಗಬೇಕೆಂದು ಮತ್ತು ವಸುದೈವಕುಟುಂಬಕಂ ಎಂಬ ನಿಜವಾದ ಭಾರತೀಯರಾಗಿ ಸನಾತನ ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟವರು. ಈ ನಿಟ್ಟಿನಲ್ಲಿ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ನಮ್ಮ ಗ್ರಾಹಕರು ಅಭಿವೃದ್ಧಿ ಮತ್ತು ಶ್ರೀಮಂತರಾಗಬೇಕೆಂಬುದು ಎಂಬ ಉದ್ದೇಶ ಇಟ್ಟುಕೊಂಡಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯ, ನಗರಸಭೆ ಅಧ್ಯಕ್ಷರಾಗಿರುವ ಸೊಸೈಟಿಯ ನಿರ್ದೇಶಕ ಕೆ.ಜೀವಂಧರ್ ಜೈನ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ದ.ಕ.ಜಿಲ್ಲಾ ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹೀನಾ, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್, ಮಹಾವೀರ ಮೆಡಿಕಲ್ ಸೆಂಟರ್‌ನ ಮಾಲಕ ಡಾ. ಅಶೋಕ್ ಪಡಿವಾಳ್ , ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಕೆ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಠೇವಣಿ ಪತ್ರ, ಉಳಿತಾಯ ಖಾತೆ ಪತ್ರ ವಿತರಣೆ:
ಸಭೆಯಲ್ಲಿ ಆರಂಭದ ಠೇವಣಿದಾರರಿಗೆ ಠೇವಣಿ ಪತ್ರ ಮತ್ತು ಉಳಿತಾಯ ಖಾತೆ ಪತ್ರ ವಿತರಣೆಯನ್ನು ಗಣ್ಯರು ಮಾಡಿದರು. ಮಹಾವೀರ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಯ ಮಹಾಪ್ರಬಂಧಕ ಮಂಜುನಾಥ ಶೇಟ್ ಅವರು 11ಶಾಖೆಗಳ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಪರಿಚಯಿಸಿದರು. ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸುರೇಶ್ ಕುಮಾರ್ ಬಲ್ಲಾಳ್, ನಿರ್ದೇಶಕ ಪಡುಬಿದ್ರೆ ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಯಶೋಧರ್ ಜೈನ್, ಜಯರಾಜ್ ಕಾಂಬ್ಳಿ, ಮಹಾವೀರ್ ಹೆಗ್ಡೆ ಅಂಡಾರು, ಜಯಕೀರ್ತಿ ಜೈನ್ ಧರ್ಮಸ್ಥಳ, ಉಜಿತ್ ಕುಮಾರ್ ಜೈನ್ ಬೆಳ್ತಂಗಡಿ, ಸುರೇಖಾ ಅರ್ ಹೆಗ್ಡೆ, ಪ್ರವೀಣ್ ಕುಮಾರ್ ಇಂದ್ರ ಉಜಿರೆ, ವರ್ಧಮಾನ್ ಜೈನ್ ಕಾರ್ಕಳ, ರಾಜೇಶ್ ಕುಮಾರ್ ಮಂಗಳೂರು, ನಿರಂಜನ್, ವಿಜಯ ಕುಮಾರ್ ಇಂದ್ರ ಪಾಣೆಮಂಗಳೂರು, ಪ್ರಸಾದ್ ಕುಮಾರ್ ಮಂಗಳೂರು ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಮಂಜುನಾಥ್ ಸಂಸ್ಥೆಯ ನಿರ್ದೇಶಕರಿಗೆ ಹೂ ನೀಡಿ ಗೌರವಿಸಿದರು. ನವೀನ್ ಪಡಿವಾಳ್ ಪ್ರಾರ್ಥಿಸಿದರು. ಮಿತ್ರಸೇನ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಜೈನ್ ವಂದಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here