ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಕನಸುಗಳು ಕಾರ್ಯಕ್ರಮದ ಸಮಾರೋಪ: ಕನಸುಗಳನ್ನು ಸಾಕಾರಗೊಳಿಸುವ ಕಡೆಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು: ಕೃಷ್ಣಕುಮಾರ್‌ ಶೆಟ್ಟಿಕಡಬ

0

ಪುತ್ತೂರು, ನ 12: ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮುತ್ತವೆ. ಕನಸುಗಳನ್ನು ಸಾಕಾರಗೊಳಿಸುವ ಕಡೆಗೆ ವಿದ್ಯಾರ್ಥಿಗಳು ಹೆಜ್ಜೆಯನ್ನು ಹಾಕಬೇಕು. ವಿವೇಕಾನಂದಸಂಸ್ಥೆಯು ಕನಸುಗಳು ಎಂಬ ಕಾರ್ಯಕ್ರಮವನ್ನುಆಯೋಜಿಸುವ ಮೂಲಕ ಹೊಸ ಕನಸನ್ನು ಹುಟ್ಟು ಹಾಕುವ ಪ್ರಯತ್ನವನ್ನು ಮಾಡಿದೆಎಂದುವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಕೃ?ಕುಮಾರ್ ಶೆಟ್ಟಿಕಡಬ ಹೇಳಿದರು.

 

ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಹತ್ತನೇತರಗತಿ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ಕನಸುಗಳು-೨೦೨೨ ಕಾರ್ಯಕ್ರಮದ ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಪೂರಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಬೆಳೆಯಬೇಕು.ಸೋಲಿನಿಂದಕಂಗೆಡದೆಅದನ್ನುಒಂದು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಸಾಗಬೇಕು. ಸಾಮಾನ್ಯ ಮನುಷ್ಯನಾಗಿದ್ದುಕೊಂಡುಯಾವುದೇಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದರೂಕನಸನ್ನು ನನಸಾಗಿಸಬಹುದುಎಂದರು.

ವಿವೇಕಾನಂದ ಪದವಿಪೂರ್ವಕಾಲೇಜಿನ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್ ಮಾತನಾಡಿಸ್ಪೂರ್ತಿಯಿಂದಜೀವನ ಸಾಗಿಸಿದರೆ ಬದುಕು ಯಶಸ್ಸಿನ ಉತ್ತುಂಗಕ್ಕೆಏರಲು ಸಾಧ್ಯಎಂದುವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾಲೇಜಿನಆಂಗ್ಲಭಾಷೆ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ಮಾತನಾಡಿ ನಮ್ಮ ಬದುಕು ನಿಂತ ನೀರಾಗಬಾರದು ಬದಲಾಗಿಅದು ಉಸಿರಾಡುವ ಗಾಳಿಯ ಹಾಗೆ ಇರಬೇಕುಎಂದು ವರದಿಯನ್ನು ಮಂಡಿಸಿ ಪ್ರೋತ್ಸಾಹ ನುಡಿಗಳನ್ನು ಆಡಿದರು. ಬಳಿಕ ವಿವಿಧಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಮಾರಂಭದಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ಸದಸ್ಯರಾದಡಾ. ಕೆ. ಎನ್ ಸುಬ್ರಹ್ಮಣ್ಯ, ಕೃಷ್ಣಪ್ರಸನ್ನ. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಅಶ್ವಿನಿ ಎಂ. ಜಿ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಉಪನ್ಯಾಸಕಿ ಯಶವಂತಿ ನಿರೂಪಿಸಿದರು. ಉಪನ್ಯಾಸಕಿ ದಿವ್ಯಾ ಕೆ ಸ್ವಾಗತಿಸಿ ಡಾ. ಶ್ರುತಿವಂದಿಸಿದರು

LEAVE A REPLY

Please enter your comment!
Please enter your name here