ಕುಂತೂರು ಮಾರ್ ಇವಾನಿಯೋಸ್ ಆ.ಮಾ.ಶಾಲೆಯ ಸಮನ್, ರೋಶನ್ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಕಡಬ: ಕಡಬ ಸೈಂಟ್ ಆನ್ಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕುಂತೂರು ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮನ್ 200ಮೀ.ಓಟದ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ 6ನೇ ತರಗತಿಯ ರೋಶನ್ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕಡಬ ವಲಯ ಮಟ್ಟದಲ್ಲಿ ಸಂಸ್ಥೆಯ ರಿಲೇ ತಂಡದ ಸದಸ್ಯರಾದ ಸಮನ್, ರೋಶನ್, ಚಿಂತನ್ ಹಾಗೂ ನೇಹಾಲ್‌ರವರು ತೃತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರು. ಸಂಸ್ಥೆಯ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ತಿರುಮಲೇಶ್‌ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

LEAVE A REPLY

Please enter your comment!
Please enter your name here