ಸವಣೂರು: ಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಸವಣೂರು ಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ನಾಯಕಿ ನಿಸ್ಮ ಅಧ್ಯಕ್ಷತೆ ವಹಿಸಿದ್ದರು. 1ನೇ ತರಗತಿ ಮಕ್ಕಳು ಉದ್ಘಾಟಿಸಿದರು.

ಅತಿಥಿಗಳಾಗಿ ಈಡನ್ ಗ್ಲೋಬಲ್ ಸ್ಕೂಲ್‌ನ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಸವಣೂರು ಸಿ.ಎ ಬ್ಯಾಂಕ್ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆ, ಕ.ರ.ವೇ ಸ್ವಾಭಿಮಾನಿ ಬಣದ ದ.ಕ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ನಿವೃತ್ತ ದೈ.ಶಿ.ಶಿಕ್ಷಕ ದಯಾನಂದ ರೈ ಕೋರ್ಮಂಡ, ಬಶೀರ್ ಚೆಡವು ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಸವಣೂರು ಗ್ರಾ.ಪಂ ಸದಸ್ಯರಾದ ರಝಾಕ್ ಕೆನರಾ, ಬಾಬು ಎನ್ ಸವಣೂರು, ಚೆನ್ನು, ಮೊಗರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಫೀಕ್ ಎಂ.ಎ, ಅನಿವಾಸಿ ಉದ್ಯಮಿ ಅಶ್ರಫ್ ಎ, ಮೊಗರು ಶಾಲಾ ಪ್ರಭಾರ ಮುಖ್ಯಗುರು ಮಮತಾ ಎನ್
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದಿವ್ಯಲತಾ, ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ಅಬ್ದುಲ್ಲಾ ಎಸ್.ಇ, ಖಾಸಿಂ ಮಾಂತೂರು, ರಫೀಕ್ ನೆಕ್ಕರೆ, ರಝಾಕ್ ಮಾಂತೂರು, ರಫೀಕ್ ಸೋಂಪಾಡಿ, ರಝಾಕ್ ಎಸ್.ಕೆ, ಅಂಗನವಾಡಿ ಕಾರ್ಯಕರ್ತೆ ಸ್ಪೂರ್ತಿ ಉಪಸ್ಥಿತರಿದ್ದರು.
ಶಿಕ್ಷಕರಾದ ಕವಿತಾ, ಶ್ವೇತಾ, ದಯಾಮಣಿ, ಜ್ಯೋತಿ, ಸುರರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿನಿ ಶೈಮಾ ಸ್ವಾಗತಿಸಿದರು. ಆಮಿನಾ ಅಸೀಮಾ ವಂದಿಸಿದರು. ಸಮೀದಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here