ಹಣಿಯೂರು ಗುತ್ತು ತರವಾಡಿನಲ್ಲಿ ಇಂಟರ್ ಲಾಕ್ ಅಳವಡಿಕೆಗೆ ಶಾಸಕರಿಂದ ಗುದ್ದಲಿ ಪೂಜೆ

0

ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಾಲ್ಕು ಲಕ್ಷರೂಪಾಯಿ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆಗೆ ಶಾಸಕ ಸಂಜೀವ ಮಠಂದೂರುರವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ನನ್ನ ಅವಧಿಯಲ್ಲಿ ಕ್ಷೇತ್ರದುದ್ದಕ್ಕೂ ದೈವ ದೇವಸ್ಥಾನಗಳ ಸಹಿತ ಪ್ರತೀ ಹಳ್ಳಿಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ನನ್ನ ಶಕ್ತಿ ಮೀರಿ ಕೆಲಸ ಮಾಡಿರುವ ಮನತೃಪ್ತಿ ನನಗಿದೆ. ಇನ್ನು ಮುಂದಿನ ದಿನಗಳಲ್ಲಿ ದೈವಸ್ಥಾನದ ಅಭಿವೃದ್ಧಿಗೆ ಇನ್ನಷ್ಟು ಅನುದಾನವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ಹಣಿಯೂ‌ರುಗುತ್ತು ಡಯಟೀಸ್ ಟ್ರಸ್ಟ್ ನ ಅಧ್ಯಕರಾದ ಡಾ.ಕೆ.ಸಿ.ನಾಯ್ಕ್ ರವರು ಮಾತನಾಡಿ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಆಗದ ಕೆಲಸಗಳನ್ನು ಮಾಡಿ ತೋರಿಸಿದವರು ಮಠಂದೂರುರವರು. ನಮ್ಮ ಬೇಡಿಕೆಯನ್ನು ಪೂರೈಸಿಕೊಟ್ಟು ಇನ್ನಷ್ಟು ಅಭಿವೃದ್ದಿ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿದ ಅವರ ಮಾತು ನಮಗೆ ಇನ್ನಷ್ಟು ಸಂತಸತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ ಎಂದು ಶುಭಹಾರೈಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕೆ.ಸಿ.ನಾಯ್ಕ್ ರವರ ಧರ್ಮಪತ್ನಿ ಸಗುಣ ಸಿ. ನಾಯ್ಕ್, ಸಂತೋಷ್ ಕುಮಾರ್ ನಾಯ್ಕ್ ಕಾಯರ್‌ ಮಜಲ್, ಪುರುಷೋತ್ತಮ ನಾಯ್ಕ್ ಹಣಿಯೂ‌ರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಕರಾವಳಿ ಪಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚನಿಲ ತಿಮ್ಮಪ್ಪ ಶೆಟ್ಟಿ ರವರನ್ನು ಕುಟುಂಬಸ್ಥರ ಪರವಾಗಿ ಕೆ.ಸಿ.ನಾಯ್ಕ್ ರವರು ಗೌರವಿಸಿದರು.

ಕುಟಂಬದ ಹಿರಿಯರಾದ ಶ್ರೀನಿವಾಸ್‌ ನಾಯ್ಕ್ ಹಣಿಯೂರು, ಅಶೋಕ್ ನಾಯ್ಕ್ ಹಣಿಯೂರು, ಕೀರ್ತನ್ ನಾಯ್ಕ್ ಹನಿಯೂ‌ರು, ಮೋಹನ್ ನಾಯ್ಕ್ ಹಣಿಯೂರು, ಸುಕೇಶ್ ನಾಯ್ಕ್ ಹನಿಯೂ‌ರು ಪ್ರಣಮ್ ನಾಯ್ಕ್ ಹಣಿಯೂರು, ಹಾಗು ಹಣಿಯೂರು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಅಭಿಜಿತ್ ಕೊಳಕಿಮಾ‌ರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here