ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ “ಗ್ರಾಮೀಣ ವಿಜ್ಞಾನ ಮೇಳ” “ಸೈನ್ಸ್ ಎಕ್ಸ್‌ಪೊ-2022” ನ.16. ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಪರಿಸರದ 8 ಪ್ರೌಢಶಾಲೆಗಳ ಸುಮಾರು 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ ದೀಪ ಬೆಳಗಿಸುವ ಮೂಲಕ ನೇರವೇರಿಸಿದರು. ನಂತರ ಮಾತನಾಡಿದ ಅವರು ” ಸರಕಾರದ ಯಾವುದೇ ಅನುದಾನವಿಲ್ಲದಿದ್ದರೂ ನಮ್ಮ ಕಾಲೇಜಿನಲ್ಲಿ ವಿಜ್ಞಾನಕ್ಕೆ ಅಗತ್ಯವಾದ ಎಲ್ಲಾ ಮೂಲಸೌಕರ್ಯವನ್ನು ಒದಗಿಸಲಾಗಿದೆ. ಇದೀಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದ ವಿಜ್ಞಾನ ಮತ್ತು ಗಣಿತದ ಬಗ್ಗೆ ವಿವಿಧ ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಮೂಲಕ ಸರಳ ಮತ್ತು ಸುಲಭಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು ” .
ಮುಖ್ಯಅತಿಥಿಗಳಾಗಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ರಾಜೇಶ್ ನೆಲ್ಲಿತಡ್ಕ, ಸುಬೋಧ ಪ್ರೌಡಶಾಲೆ, ಆರ್ಲಪದವು ಇಲ್ಲಿನ ಮುಖ್ಯಗುರುಗಳಾದ ಶ್ರೀಪತಿ ಭಟ್ ಐ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲ ಗೌಡ ವಹಿಸಿದ್ದರು. ಭೌತಶಾಸ್ತ್ರ ಉಪನ್ಯಾಸಕ ಮಹೇಶ್ ಎಂ. ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು, ಗಣಿತ ಉಪನ್ಯಾಸಕಿ ಪ್ರತಿಭಾ ರೈ ವಂದಿಸಿ, ಜೀವಶಾಸ್ತ್ರ ಉಪನ್ಯಾಸಕಿ ಗಾಯತ್ರಿ ಎಂ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳಾದ ಕೀರ್ತನಾ ಮತ್ತು ತಂಡದವರು ಪ್ರಾರ್ಥಿಸಿದರು. ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ಪ್ರಯೋಗಾಲಗಳಲ್ಲಿ ಪ್ರಾತ್ಯಕ್ಷತೆಗಳು ನಡೆಯಿತು. ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ರೋಬೋಟ್ ಟೆಕ್ನಾಲಜಿ, ದ್ರೋಣ್ , ವಿವಿಧ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು.
ಸ್ಪರ್ಧೆಗಳ ಫಲಿತಾಂಶ : ರಸಪ್ರಶ್ನೆ – ಪ್ರಥಮ: ಶ್ರೇಯಾ ಪ್ರಕಾಶ, ಪ್ರಾಪ್ತಿ, ಪ್ರಿಯದರ್ಶಿನಿ ಪ್ರೌಢಶಾಲೆ, ದ್ವಿತೀಯ: ಭವಿಷ್ಯ, ನಮಿತಾ ಸ.ಪ್ರೌ.ಶಾಲೆ ಇರ್ದೆ ಉಪ್ಪಳಿಗೆ, ತೃತೀಯ: ಶರಣ್ಯ, ಯಶ್ವಿ ಪ್ರಿಯದರ್ಶಿನಿ ಪ್ರೌಢಶಾಲೆ.
ವಿಜ್ಞಾನ ಚಿತ್ರ ಸ್ಪರ್ಧೆ – ಪ್ರಥಮ: ಸುಪ್ರೀತ ಬಿ, ಸುಬೋಧ ಪ್ರೌಢಶಾಲೆ, ದ್ವಿತೀಯ: ತನ್ವಿ ಶೆಟ್ಟಿ ಪ್ರಿಯದರ್ಶಿನಿ ಪ್ರೌಢಶಾಲೆ , ತೃತೀಯ: ವೈಷ್ಣವಿ ಎಸ್.ಎಂ. ಸವೋದಯ ಪ್ರೌಢಶಾಲೆ ,
ಔಷಧೀಯ ಸಸ್ಯಗಳನ್ನು ಗುರುತಿಸುವಿಕೆ – ಪ್ರಥಮ: ಯಶಸ್ವಿ ಬಿ. ಪ್ರಿಯದರ್ಶಿನಿ ಪ್ರೌಢಶಾಲೆ ದ್ವಿತೀಯ: ಶಿಲ್ಪ ನವೋದಯ ಪ್ರೌಢಶಾಲೆ , ತೃತೀಯ: ಚೈತನ್ಯ ಜಿ. ಸುಬೋಧ ಪ್ರೌಢಶಾಲೆ
ಗಣಿತ ಸಮಸ್ಯೆ ಬಿಡಿಸುವ ಸ್ಪರ್ಧೆ ಪ್ರಥಮ : ಆನುಷಾ ಎನ್. ನವೋದಯ ಪ್ರೌಢಶಾಲೆ, ದ್ವಿತೀಯ: ಶ್ರವಣ ಎನ್. ನವೋದಯ ಪ್ರೌಢಶಾಲೆ, ತೃತೀಯ : ಆಪರ್ಣ ಅಡಿಗ ಪ್ರಿಯದರ್ಶಿನಿ ಪ್ರೌಢಶಾಲೆ,
ವಿಜ್ಞಾನ ಪ್ರಯೋಗ ಸ್ಪರ್ಧೆ ಪ್ರಥಮ ಆನ್ವಿತಾ ಎನ್. ಪ್ರಿಯದರ್ಶಿನಿ ಪ್ರೌಢಶಾಲೆ, ದ್ವಿತೀಯ : ಆನುಷಾ ನವೋದಯ ಪ್ರೌಢಶಾಲೆ, ತೃತೀಯ : ಆದಿತ್ಯ ನಾಯಕ್ ಸವೋದಯ ಪ್ರೌಢಶಾಲೆ ಇವರುಗಳು ಪಡೆದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ.ಸೂರ್ಯನಾರಯಣ ಭಟ್ ಮಾತನಾಡಿ ” ಗ್ರಾಮೀಣ ಪ್ರದೇಶದ ಸರಕಾರಿ ಕಾಲೇಜಿನಲ್ಲಿ ಇಂತಹ ಉತ್ತಮ ವಿಜ್ಞಾನ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ, ಮುಂದೆ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುವ ಮೂಲಕ ಈ ಪ್ರದೇಶ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಅವಕಾಶಗಳು ಪಡೆಯುವಂತಾಗಬೇಕು ಎಂದರು” ,
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನವೋದಯ ಪ್ರೌಢಶಾಲೆ ಮುಖ್ಯಗುರುಗಳಾದ ಪುಷ್ಪಾವತಿ ಸ.ಪ.ಪೂ.ಕಾಲೇಜು ಬೆಳಿಯೂರುಕಟ್ಟೆ ಪ್ರಾಂಶುಪಾಲರಾದ ಹರಿಪ್ರಕಾಶ, ಬೆಟ್ಟಂಪಾಡಿ ಸಿಎ ಬ್ಯಾಂಕಿನ ನಿರ್ದೇಶಕರಾದ ಕರುಣಾಕರ ಶೆಟ್ಟಿ ಕೋರ್ಮಂಡ ಭಾಗವಹಿಸಿದ್ದರು. ಅತಿಥಿಗಳು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಜ್ಯೋತಿ ಕುಮಾರಿ ಕೆ ವಿಜೇತರ ಪಟ್ಟಿ ವಾಚಿಸಿದರು. ರಸಾಯನಶಾಸ್ತ್ರ ಉಪನ್ಯಾಸಕ ಸೈಯದ್ ಫಾರೂಕ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ಉಪನ್ಯಾಸಕಮಹೇಶ್ ಎಂ ಸ್ವಾಗತಿಸಿ, ಇತಿಹಾಸ ಉಪನ್ಯಾಸಕಿ ಶ್ರೀಮತಿ ರಜನಿ ಬಿ. ವಂದಿಸಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕರು ವಿವಿಧ ಸ್ಪರ್ಧೆಗಳ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.