




ಅಪ್ರಾಪ್ತ ರಿಗೆ ವಾಹನ ಚಲಾಯಿಸಲು ನೀಡುವ ಮುನ್ನ ಎಚ್ಚರ..



ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ವಾಹನ ಮಾಲಿಕನಿಗೆ 20 ಸಾವಿರ ದಂಡ ವಿಧಿಸಿದ ಪುತ್ತೂರು ನ್ಯಾಯಾಲಯ!





ಕಡಬ: ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ.
ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಂಡ ಪಾವತಿಸಿದ ವ್ಯಕ್ತಿ.
2020ನೇ ಇಸವಿಯಲ್ಲಿ ಕೊಯಿಲದಲ್ಲಿ ಅಬ್ದುಲ್ ರಹಿಮಾನ್ ಎಂಬವರು ತನ್ನ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದು, ಆ ಬೈಕ್ ಅಪಘಾತವಾಗಿ ಅಪ್ರಾಪ್ತ ಬಾಲಕನ ವಿರುದ್ದ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿಯವರು ತೀರ್ಪು ನೀಡಿ, ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದ ವಾಹನ ಮಾಲಿಕನಿಗೆ 20 ಸಾವಿರ ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಎ.ಪಿ.ಪಿ. ಕವಿತಾ ಅವರು ವಾದಿಸಿದ್ದರು.







