ಉಚಿತ ದಂತ ತಪಾಸಣೆ, ಚಿಕಿತ್ಸಾ ಶಿಬಿರ

0

ಪುತ್ತೂರು: ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು ಘಟಕ ಹಾಗೂ ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಆಶ್ರಯದಲ್ಲಿ ಪುತ್ತೂರು ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ನ. ೧೮ರಂದು ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷೆ ಡಾ. ಅಮೃತ ಕೆ. ಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್, ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರೊಸ್ತೋಡೊಂಟಿಕ್ಸ್ ಆಂಡ್ ಇಂಪ್ಲಾಟೋಲಜಿ ವಿಭಾಗದ ರೀಡರ್ ಡಾ. ಮಿಥುನ್ ಉಪಾಧ್ಯಾಯ, ಡಾ. ಶಿವರಾಮ ಕಾರಂತ ಪ್ರೌಢಶಾಲಾ ಮುಖ್ಯಶಿಕ್ಷಕಿ ಜಲಜಾಕ್ಷಿ ಶುಭಹಾರೈಸಿದರು. ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ಕಾರ್ಯಕ್ರಮ ಸಂಯೋಜಕ ವಿಜಯ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಕಾರ್ಯದರ್ಶಿ ಮಹೇಶ್ಚಂದ್ರ ವಂದಿಸಿದರು. ಶಾಲಾ ಶಿಕ್ಷಕ ಅಬ್ರಹಾಂ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳು, ಪ್ರಗತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ದಂತ ತಪಾಸಣೆ ಹಾಗೂ ಚಿಕಿತ್ಸೆ ನಡೆಯಿತು. ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ವೈದ್ಯರು, ಸಿಬ್ಬಂದಿಗಳು ಶಿಬಿರ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here