ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ “ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳ ಮಾಹಿತಿ ಕಾರ್ಯಾಗಾರ

0

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ(ರಿ)ಪುತ್ತೂರು ಇದರ ಶತಮಾನೋತ್ಸವದ ಶತಸಂಭ್ರಮ ಕಾರ್ಯಕ್ರಮದ ಅಂಗವಾಗಿ ಶ್ರೀ ಸರಸ್ವತಿ ಮಹಿಳಾ ಮಂಡಳಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ತರಬೇತುದಾರರ ಸಂಚಯನ ಮಂಗಳೂರು ಸಹಯೋಗದಲ್ಲಿ “ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳ” ಅರಿವು ಕಾರ್ಯಾಗಾರ ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಿತು.


ದ.ಕ ಜಿಲ್ಲಾ ಮಹಿಳಾ ತರಬೇತುದಾರರ ಸಂಚಯನ ಮಂಗಳೂರಿನ ಶ್ರೀಮತಿ ವತ್ಸಲಾ ನಾಯಕ್ ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ದ ಕ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ ಮಂಗಳೂರಿನ ಸದಸ್ಯರಾದ ರೋಹಿಣಿ ಆಚಾರ್, ಹರಿಣಾಕ್ಷಿ ಪಿ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ  ಬಾಲಕೃಷ್ಣ ನಾಯಕ್ ತೆಂಕಿಲ, ಮಹಿಳಾ ಮಂಡಳಿಯ ಅಧ್ಯಕ್ಷೆ  ರಂಜಿತಾ ಪ್ರಭು, ಉಪಾಧ್ಯಕ್ಷೆ ಅರುಣ ಪುತ್ತೂರು, ಸದಸ್ಯೆಯರುಗಳಾದ  ದೇವಕಿ ಸಂಟ್ಯಾರು,  ರೇಖಾ ಪ್ರಭು, ವೇದಾವತಿ,ಸಿಂಧೂ, ಮಲ್ಲಿಕಾ ಕುಕ್ಕಾಡಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಭಯ್, ಕಾರ್ಯದರ್ಶಿಯಾದ ಅಮೃತಾಂಬ ಪ್ರಭು ಉಪಸ್ಥಿತರಿದ್ದರು.

ಮಲ್ಲಿಕಾ ಕುಕ್ಕಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ನಾಯಕ್ ತೆಂಕಿಲ ವಂದಿಸಿದರು‌.

LEAVE A REPLY

Please enter your comment!
Please enter your name here