ಯೋಗ, ಭಜನೆಯೊಂದಿಗೆ ಕ್ರಾಫ್ಟ್ ಕಲಿತು ಖುಷಿಪಟ್ಟ ಪುಟಾಣಿಗಳು
ಮಕ್ಕಳನ್ನು ನಮ್ಮ ಆಸ್ತಿ ಎಂದು ಪರಗಣಿಸಿ- ಪೋಷಕರಿಗೆ ಡಾ. ಸುಧಾ ಎಸ್. ರಾವ್ ಕರೆ
ಬೆಟ್ಟಂಪಾಡಿ: ಬೆಟ್ಟಂಪಾಡಿ ದೇವಾಲಯದಲ್ಲಿ ಪ್ರತಿ ಭಾನುವಾರ ನಡೆಯುತ್ತಿರುವ ಧಾರ್ಮಿಕ ಶಿಕ್ಷಣದ ಅಂಗವಾಗಿ ವಿಶೇಷ ಕಾರ್ಯಕ್ರಮ ‘ಸಂವರ್ಧನ’ ನ. 20 ರಂದು ಕ್ಷೇತ್ರದಲ್ಲಿ ನಡೆಯಿತು.
ಬೆಳಿಗ್ಗೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಯೋಗ, ಕ್ರಾಫ್ಟ್ ಕಾರ್ಯಗಾರಗಳೊಂದಿಗೆ ಮಧ್ಯಾಹ್ನದವರೆಗೆ ನಡೆದು ಬಳಿಕ ಸಹಭೋಜನ ನಡೆಯಿತು.
ಪೋಷಕರೊಂದಿಗೆ ಸಂವಾದ
ಇದೇ ವೇಳೆ ಮಕ್ಕಳ ಪೋಷಕರೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಡಾ. ಸುಧಾ ಎಸ್. ರಾವ್ ಸಂವಾದ ನಡೆಸಿಕೊಟ್ಟರು.
‘ಮಕ್ಕಳನ್ನು ಆಸ್ತಿ ಎಂದು ಪರಿಗಣಿಸಿ ಆಸ್ತಿಯನ್ನು ನೋಡಿಕೊಂಡ ಹಾಗೇ ಮಕ್ಕಳನ್ನು ಲಾಲನೆ ಪಾಲನೆಯ ಜವಾಬ್ದಾರಿ ನಮ್ಮಲ್ಲಿದೆ. ಕೂಡುಕುಟುಂಬ ಪದ್ದತಿಯಲ್ಲಿ ಮಕ್ಕಳಿಗೆ ಸಂಸ್ಕಾರ, ನೈತಿಕ ಮೌಲ್ಯದ ಅರಿವು ಬರುತ್ತಿತ್ತು. ಈಗ ಅದಿಲ್ಲ. ಹಾಗಾಗಿ ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ಅನಿವಾರ್ಯವಾಗಿದೆ’ ಎಂದರು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಮಿತ್ತಡ್ಕ ಭಜನಾ ತರಬೇತಿ ನೀಡಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಯೋಗ ತರಬೇತುದಾರ ದಯಾನಂದ ರೈ ಕೋರ್ಮಂಡ ಯೋಗ ಕ್ಲಾಸ್ ನಡೆಸಿಕೊಟ್ಟರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿನಮಿತಾ ಕಥಾ ಸರಣಿ ನಡೆಸಿಕೊಟ್ಟರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿಯರಾದ ಸೂರ್ಯಕಲಾ, ಜ್ಯೋತಿ, ಶ್ರೀಜಾ, ಶ್ರೀ ವಿದ್ಯಾ, ಪಲ್ಲವಿ, ಪಲ್ಲವಿ, ಅನಿತಾ ಕ್ರಾಫ್ಟ್ ತರಗತಿ ನಡೆಸಿಕೊಟ್ಟರು.
ಭಾನುವಾರದ ಆಟೋಟಗಳಲ್ಲಿ ದಿನ ಕಳೆಯುವ ಪುಟಾಣಿಗಳು ಈ ದಿನ ಭಜನೆ, ಯೋಗ, ಕಥೆ, ಕ್ರಾಫ್ಟ್ ತರಗತಿಗಳೊಂದಿಗೆ ವಿಶೇಷ ಅನುಭವ ಪಡೆದು ಸಂಭ್ರಮಿಸಿದರು.ಕಾರ್ಯಕ್ರಮವನ್ನು ಶಿವಪ್ರಸಾದ್ ತಲೆಪ್ಪಾಡಿ ನಿರೂಪಿಸಿದರು.