ಪುತ್ತೂರು : ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಶಾಂತಿವನ ಟ್ರಸ್ಟ್ ಮತ್ತು ಶ್ರೀಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ವತಿಯಿಂದ ನೃತ್ಯ ಶಿಕ್ಷಕಿ ಮೇಘ ಕಲಾ ಆರ್ಟ್ಸ್ನ ಮಾಲಕಿ ಪುತ್ತೂರು ಶಾರದಾ ದಾಮೋದರ್ರವರನ್ನು ತೆಂಕಿಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನೃತ್ಯ ಶಿಕ್ಷಕಿಯಾಗಿ ಜೊತೆಗೆ ಮಕ್ಕಳ ಪ್ರತಿಭೆಗಳಿಗೆ ಸಂಬಂಧಿತ ಉಡುಗೆ ತೊಡುಗೆಗಳನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿರುವ ಶಾರದಾ ದಾಮೋದರ್ರವರು ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಿದ್ದಾರೆ. ಮೇಘ ಕಲಾ ಆರ್ಟ್ಸ್ ಹಾಗೂ ಮೇಘ ಡ್ಯಾನ್ಸ್ ಸ್ಟುಡಿಯೋ ಸ್ಥಾಪಿಸಿ ಆ ಮೂಲಕ ಮಕ್ಕಳ ಸಾಂಸ್ಕೃತಿಕ ರಂಗಕ್ಕೆ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಬಂದಿರುವ ಇವರ ಕಲಾ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಗಿದೆ. ಇವರು ಕಡಬ ತಾಲೂಕಿನ ಕಾಮಣ ಗ್ರಾಮದ ನಿವಾಸಿಯಾಗಿದ್ದಾರೆ.