ಪುತ್ತೂರು: ಹಿಂದೂ ಜನಜಾಗೃತಿ ಸಮಿತಿಯಿಂದ 2 ದಿನ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನವು ನ.22ರಂದು ಸಂಪನ್ನಗೊಂಡಿದೆ.
ಬಂಟ್ವಾಳ ತಾಲೂಕಿನ ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಮಾತನಾಡಿ ಹಿಂದೂ ಸಂಸ್ಕೃತಿಯ ರಕ್ಷಣೆ ಹಿಂದುಗಳ ಕರ್ತವ್ಯವಾಗಿದೆ. .ಸನಾತನ ಸಂಸ್ಥೆಯು ಸಮಾಜದಲ್ಲಿ ಸಂಸ್ಕಾರ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಚಂದ್ರಮೊಗೇರ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಆದರ್ಶವನ್ನಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಠಿಬಧ್ಧರಾಗಿರಿ ಎಂದರು. ಉದ್ಯಮಿ ದಿನೇಶ್ ಎಂ.ಪಿ ಅವರು ಮಾತನಾಡಿ ಹಿಂದೂ ಧರ್ಮದ ವಿಡಂಬಣೆಯನ್ನು ಕಾನೂನಾತ್ಮವಾಗಿ ವಿರೋಧಿಸಿ ಹಿಂದೂಗಳಲ್ಲಿ ಧರ್ಮರಕ್ಷಣೆಯ ಬಗ್ಗೆ ಕೃತಿಶೀಲರಾಗಲು ಧರ್ಮಶಿಕ್ಷಣ ನೀಡಬೇಕು ಎಂದರು. ಸಭೆಯ ಸಮಾರೋಪ ಸಮಾರಂಭದ ಕೊನೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು.