ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಪ್ರಥಮ ಸಭೆಯಲ್ಲಿ ನಿರ್ಣಯ
ಪುತ್ತೂರು: ಕಠಿಣ ಕೆಲಸ ಮಾಡುತ್ತಿರುವ ವಿದ್ಯುತ್ ಕಂಬ ಅಳವಡಿಸುವವರಿಗೆ ಮತ್ತು ಅವರನ್ನು ಅವಲಂಬಿಸುವ ಮನೆಮಂದಿಗೆ ಸರಕಾರ ಭದ್ರತೆ ನೀಡಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುವ ಕುರಿತು ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಪ್ರಥಮ ಸಭೆಯಲ್ಲಿ ನಿರ್ಣಯಿಸಲಾಯಿತು.
ನ.20ರಂದು ಪುತ್ತೂರು ಅನುರಾಗವಠಾರದಲ್ಲಿ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಪ್ರಥಮ ಮಾಸಿಕ ಸಭೆಯು ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಮಿಕರು ಕೇವಲ ಕಂಬ ಅಳವಡಿಸುವುದರಲ್ಲದೆ ಎಲ್ಲಾ ಕೆಲಸ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಅಪಘಾತದಂತಹ ಕಠಿಣ ಸಂದರ್ಭ ತೊಂದರೆ ಆದರೆ ಅವರ ಮನೆ ಮಂದಿಗೆ ಸರಕಾರ ಭದ್ರತೆ ನೀಡಬೇಕೆಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಮುಂದಿನ ದಿನ ಪೇಟೆಯಲ್ಲಿ ಕಂಬ ಅಳವಡಿಸುವ ಕೆಲಸ ಕಡಿಮೆ ಆಗಿದ್ದು, ಬೂಗತ ಕೇಬಲ್ ಅಳವಡಿಸುವ ಕಾರ್ಯವನ್ನು ಕಾರ್ಮಿಕರಿಗೆ ನೀಡಬೇಕಾಗಿದೆ ಎಂದು ಜಯರಾಮ ಕುಲಾಲ್ ಹೇಳಿದರು. ಸಂಘದ ಸಭೆಯನ್ನು ತಿಂಗಳ ಮೊದಲ ಆದಿತ್ಯವಾರ ಮಾಡುವುದಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸರಕಾರದ ಗಮನ ಸೆಳೆಯಲು ಸಂಬಂಧಿಸಿದವರಿಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಯಿತು. ವೇದಿಕೆಯಲ್ಲಿ ಸಂಘದ ಗೌರವ ಸಲಹೆಗಾರ ಎಂ.ಸೇಸಪ್ಪ ಕುಲಾಲ್, ಪ್ರಧಾನ ಕಾರ್ಯದರ್ಸಿ ಸುಂದರ ಸೇಡಿಯಾಪು, ಕೋಶಾಧಿಕಾರಿ ಮೋನಪ್ಪ ಕೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುಂದರ ಸ್ವಾಗತಿಸಿ, ಜತೆ ಕಾರ್ಯದರ್ಶಿ ವೆಂಕಟೇಶ್ ಸುಣ್ಣಾಜೆ ವಂದಿಸಿದರು