28 ತಂಡಗಳಿಂದ 336 ಆಟಗಾರು ಸೇರಿದಂತೆ 500ಕ್ಕೂ ಮಿಕ್ಕಿ ಕ್ರೀಡಾ ಮನಸ್ಸುಗಳ ಸಂಗಮಕ್ಕೆ ಸಾಕ್ಷಿಯಾದ ಕಾಂಚನ ಪ್ರೌಢಶಾಲಾ ಮೈದಾನ
ಉಪ್ಪಿನಂಗಡಿ :ವಿಕ್ರಂ ಯುವಕ ಮಂಡಲ ಕಾಂಚನ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಯುವಜೇಸಿ ಉಪ್ಪಿನಂಗಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಹಿರಿಯ ವಿದ್ಯಾರ್ಥಿ ಸಂಘ ಪ್ರೌಢಶಾಲೆ ಕಾಂಚನ ಇದರ ಸಹಭಾಗಿತ್ವದಲ್ಲಿ ಆರೋಗ್ಯಯುತ ಯುವಜನತೆಗಾಗಿ ಗ್ರಾಮೀಣ ಸೊಗಡಿನ 11 ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
28 ತಂಡಗಳಿಂದ 336 ಆಟಗಾರು ಸೇರಿದಂತೆ ಸುಮಾರು 500 ಕ್ರೀಡಾ ಮನಸ್ಸುಗಳ ಸಂಗಮಕ್ಕೆ ಸಾಕ್ಷಿಯಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸೂರ್ಯಪ್ರಕಾಶ ಉಡುಪ ದೀಪ ಬೆಳಗಿಸಿ ಉದ್ಘಾಟಿಸಿದರು.
ಜೇಸಿಯ ಪೂರ್ವಾಧ್ಯಕ್ಷ ಜೇಸಿ ರವೀಂದ್ರ ದರ್ಭೆ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ ರೋಟರಿ ಕ್ಲಬ್ ಕಾರ್ಯದರ್ಶಿ ಜೇಸಿ ಹರೀಶ್ ನಟ್ಟಿಬೈಲು, ವಿಕ್ರಂ ಯುವಕ ಮಂಡಲ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ, ಉಪಾಧ್ಯಕ್ಷ ಜೇಸಿ ಸಚಿನ್ ಮುದ್ಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ರಾಮಚಂದ್ರ , ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶ್ರೀ ಚಂದ್ರಶೇಖರ , ಜೇಸಿಐ ಮಂಡತ್ಯಾರು ಅಧ್ಯಕ್ಷ ಜೇಸಿ ಭರತ್ ಶೆಟ್ಟಿ,ವಲಯ ತರಬೇತುದಾರರು ಜೇಸಿ ಸುಧೀರ್, ಜೇಸಿ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜೇಸಿಐ ಉಪ್ಪಿನಂಗಡಿ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆ ವಹಿಸಿದ್ದರು.ಜೇಸಿ ಆನಂದ ರಾಮಕುಂಜ, ಜೇಸಿ ಶಶಿಧರ್ ನೆಕ್ಕಿಲಾಡಿ, ಜೇಸಿ ಕುಶಾಲಪ್ಪ, ಜೇಸಿ ಸುರೇಶ್, ಜೇಸಿ ಮಹೇಶ್, ಜೇಸಿ ಪುನೀತ್, ಜೇಸಿ ನಾಗೇಶ್, ಜೇಸಿ ದಿವಾಕರ, ಜೇಸಿ ಪುರುಷೋತ್ತಮ, ಜೇಸಿ ಮನೋಜ್, ದಯಾನಂದ, ರಾಮಣ್ಣ ಪುಯಿಲ , ಧನಂಜಯ ಪುಯಿಲ, ಶ್ರೀಧರ್ ಮುದ್ಯ , ಬಾಲಕೃಷ್ಣ, ಶಶಿಧರ್ ಮುದ್ಯ ಭಾಗವಹಿಸಿದ್ದರು.ವೀಕ್ಷಣೆ ವಿವರಣೆಗಾರ ಸುಮಂತ್ ಶಾಂತಿನಗರ , ಕ್ರೀಡಾ ನಿರ್ಣಾಯಕರು ಶ್ರೀ ಹೇಮಂತ್ ನೆಕ್ಕರೆ, ದೀಪಕ್, ಜಯರಾಮ, ತ್ಯಾಗರಾಜ, ಗಿರೀಶ್ ಮುದ್ಯ, ಶರತ್ ಮುದ್ಯ , ಉಮೇಶ್, ಚಂದ್ರ,ನವೀನ್ ಪುಯಿಲ , ಚರಣ್ ಶಾಮಿಯಾನ ಮಾಲಕ ರುಕ್ಮಯ ಪುಯಿಲ,ಕಾಂಚನ ಸೌಂಡ್ಸ್ ಮಾಲಕ ಹರೀಶ್ ಉರಾಬೆ, ಪಂದ್ಯಾಟಕ್ಕೆ ಶಾಶ್ವತ ಟ್ರೋಫಿಗಳನ್ನು ಶ್ರೀ ಹರಿಕೃಷ್ಣ ಬೆದ್ರೋಡಿ ನೀಡಿ ಸಹಕರಿಸಿದರು.
ಪುತ್ತೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಶ್ರೀ ಮುಕುಂದ ಬಜತ್ತೂರು ಬಹುಮಾನ ವಿತರಿಸಿದರು.ಒಟ್ಟು 28 ತಂಡಗಳು ಪಾಲ್ಗೊಂಡು ಪ್ರಥಮ ಬಹುಮಾನ ರೂಪಾಯಿ 10000ದೊಂದಿಗೆ ಸ್ಪಂದನ ಟ್ರೋಫಿಯನ್ನು ಪಿಲಿಗೂಡು ತಂಡ ಮತ್ತು ದ್ವಿತೀಯ ಬಹುಮಾನ ರೂಪಾಯಿ 7000ದೊಂದಿಗೆ ಸ್ಪಂದನ ಟ್ರೋಫಿಯನ್ನು ಪ್ರಗತಿ ಹೊಸಮಜಲು ಪಡೆದುಕೊಂಡವು.ಶ್ರೀ ಸಿದ್ದೀಕ್ ಉತ್ತಮ ಎಸೆತಗಾರ, ಶ್ರೀ ರಕ್ಷಿತ್ ಉತ್ತಮ ಬ್ಯಾಟ್ಸ್ ಮನ್,ಮತ್ತು ಪೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಯನ್ನು ನೌಫಲ್ ಮತ್ತು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿವನ್ನು ಶಫೀಕ್ ಪಡೆದುಕೊಂಡರು.