ಪುತ್ತೂರು, ನವೆಂಬರ್ 5: ಪರಿಸರದಉಳಿವಿಗಾಗಿ ಮತ್ತು ರಕ್ಷಣೆಗಾಗಿ ಆದಂತಹ ಈ ಸಂಘಟನೆಯ ಸದಸ್ಯರು ಆಸಕ್ತಿ, ಶ್ರದ್ದೆಯಿಂದ ಕಾರ್ಯವನ್ನು ಮಾಡಬೇಕು. ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸುವ ಮೂಲಕ ಅರಿವು ಮೂಡಿಸಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಎಸ್ ಈಶ್ವರ ಪ್ರಸಾದ್ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನುಡಿದರು.
ಅವರು ವಿವೇಕಾನಂದ ಮಹಾವಿದ್ಯಾಲಯ ( ಸ್ವಾಯತ್ತ )ದ ಸಸ್ಯ ಶಾಸ್ತ್ರ ಹಾಗೂ ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕದ ಅಶ್ರಯದಲ್ಲಿ ಆಯೋಜಿಸಿದ ನೇಚರ್ ಕ್ಲಬ್ ಉದ್ಘಟನಾ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರದ ಅವನತಿಯು ಹೆಚ್ಚಾಗುತ್ತಿದ್ದು ಅದರ ತಡೆಯುವಿಕೆಗಾಗಿ ನೇಚರ್ ಕ್ಲಬ್ ಸಂಘಟನೆಯ ಮೂಲಕ ಒಂದು ಒಳ್ಳೆಯ ಕಾರ್ಯಗಳನ್ನು ವಿದ್ಯಾರ್ಥಿಗಳು ಮಾಡಬೇಕು. ಈ ಕ್ಲಬ್ ಹಲವು ರೀತಿಯ ವೇದಿಕೆಗಳನ್ನು ಕಲ್ಪಿಸಿ ಕೊಡುವಲ್ಲಿ ಸಹಾಯಕ. ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಸಮೂಹದಲ್ಲಿ ಚರ್ಚೆ ಮಾಡಿಕೊಂಡು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶುಭ ಹಾರೈಕೆಯನ್ನು ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಸ್ಮಿತಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ನೇಚರ್ ಕ್ಲಬ್ ನ ಅಧ್ಯಕ್ಷೆ ಸ್ವಾತಿ, ಕಾರ್ಯದರ್ಶಿ ಪ್ರತಿಕ್ಷಾ, ಜತೆ ಕಾರ್ಯದರ್ಶಿ ನರಸಿಂಹ ಕಿಣಿ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಷಾ ಸ್ವಾಗತಿಸಿ,ಸಾಧನ ವಂದಿಸಿ, ಪ್ರತಿಕ್ಷಾ ಕಾರ್ಯಕ್ರಮ ನಿರ್ವಹಿಸಿದರು.