ಅಕ್ಷಯ ಕಾಲೇಜಿನಲ್ಲಿ “ಇನ್ವಿಕ್ತ” ಕಾಮರ್ಸ್ ಆಸೋಸಿಯೇಶನ್ ಉದ್ಘಾಟನೆ

0

ಪುತ್ತೂರು: ಪುತ್ತೂರು ಇಲ್ಲಿನ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ನ.24ರಂದು  ಕಾಮರ್ಸ್ ಆಸೋಸಿಯೇಶನ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ವಿಜಯ ಸರಸ್ವತಿ ಬಿ ಇವರು ಉದ್ಘಾಟಿಸಿ, Skills for Industrial Readiness ಎಂಬ ವಿಷಯದ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಉದ್ಘಾಟಿಸಿ, ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಕಾಮರ್ಸ್ ಆಸೋಸಿಯೇಶನ್‌ನ ಉದ್ದೇಶವನ್ನು ತಿಳಿಸಿ ಶುಭಹಾರೈಸಿದರು.

ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಮಾತನಾಡಿ, ಕಾಮರ್ಸ್ ಆಸೋಸಿಯೇಶನ್‌ನ ಕಾರ್ಯಕ್ರಮಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ದಿಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಮರ್ಸ್ ಆಸೋಸಿಯೇಶನ್‌ನ ಸಂಯೋಜಕರಾದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು. ಭವ್ಯಶ್ರೀ ಬಿ ಇವರು ಆಸೋಸಿಯೇಶನ್‌ನ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥಕಿಶೋರ್ ಕುಮಾರ್ ರೈ ಕೆ ಉಪಸ್ಥಿತರಿದ್ದರು.
ದ್ವಿತೀಯ ವಾಣಿಜ್ಯ ವಿಭಾಗದ ಕಾಮರ್ಸ್ ಆಸೋಸಿಯೇಶನ್‌ನ ಸೆಕ್ರೆಟರಿ ವಿದ್ಯಾರ್ಥಿ ಪ್ರಣಮ್ ಸ್ವಾಗತಿ, ಪ್ರಥಮ ವರ್ಷದ ವಿದ್ಯಾರ್ಥಿ ಕೌಶಿಕ್ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here