





ಪುತ್ತೂರು: ಸರಕಾರಿ ಪ್ರೌಢ ಶಾಲೆ ಕಲ್ಪಣೆ, ಸರ್ವೆ ಇಲ್ಲಿನ ಹಿರಿಯ ವಿದ್ಯಾರ್ಥಿ ರಜನೀಕಾಂತ್ ಬಾಲಾಯ ಹಾಗೂ ವಿದ್ಯಾ ರಜನೀಕಾಂತ್ ಬಾಳಾಯ ಅವರು ತಮ್ಮ ಪುತ್ರ ರುಶಾಂಕನ ಮೊದಲು ಜನ್ಮ ದಿನಾಚರಣೆ ಪ್ರಯುಕ್ತ ತಾನು ವಿದ್ಯೆ ಕಲಿತ ಸರ್ವೆ ಕಲ್ಪಣೆ ಪ್ರೌಢ ಶಾಲೆಗೆ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದರು.








ಸಂಸ್ಥೆಯ ವತಿಯಿಂದ ರಜನೀಕಾಂತ್ ದಂಪತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕರುಣಾಕರ ಗೌಡ ಎಲಿಯ ಅಧ್ಯಕ್ಷತೆ ವಹಿಸಿದ್ದರು .ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಹದೇವ ಇ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







