ಆರ್ಯಾಪು ಲೀಲಾವತಿ ಆಚಾರ್ಯರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಇತ್ತೀಚೆಗೆ ಅನಾರೋಗ್ಯದಿಂದ ಅಗಲಿದ ಸಂಪ್ಯ ನಿವಾಸಿ ಸುಬ್ರಾಯ ಆಚಾರ್ಯರವರ ಪತ್ನಿ ಶ್ರೀಮತಿ ಲೀಲಾವತಿ ಆಚಾರ್ಯರವರ ವಿಶ್ವ ಬ್ರಾಹ್ಮಣ ಸಮಾರಾಧನೆಯು ನ.27 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.


ಮುಖ್ಯ ಪುರೋಹಿತರಾದ ವಿಶ್ವೇಶ್ವರ ಪುರೋಹಿತ್, ಸಹಾಯಕ ಪುರೋಹಿತರಾದ ಕೇಶವ ಪುರೋಹಿತ್, ಹೇಮಂತ್ ಪುರೋಹಿತ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಮುಖ್ಯ ಪುರೋಹಿತರಾದ ವಿಶ್ವೇಶ್ವರ ಪುರೋಹಿತ್ ರವರು, ಅಗಲಿದ ಲೀಲಾವತಿ ಆಚಾರ್ಯರವರೋರ್ವ ಆದರ್ಶ ಗೃಹಿಣಿಯಾಗಿದ್ದು, ಜೀವನದಲ್ಲಿ ಶ್ರೇಷ್ಟ ಸಂಸ್ಕಾರ, ಸಂಸ್ಕೃತಿ, ಸರಳತೆ, ಸಜ್ಜನಿಕೆ, ಸತ್ಯ, ನ್ಯಾಯ, ನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದರು. ಪತಿ ಸುಬ್ರಾಯ ಆಚಾರ್ಯರವರ ಬಾಳಿಗೆ ಬೆಳಕಾಗಿ, ಮಕ್ಕಳಿಗೆ ಆಸರೆಯಾಗಿ, ಮೊಮ್ಮಕ್ಕಳಿಗೆ ಹಾಗೂ ಮರಿಮಕ್ಕಳಿಗೆ ಪ್ರೀತಿಯ ಚಿಲುಮೆಯಾಗಿ ಸಂಸಾರವನ್ನು ಸರಿದೂಗಿಸಿಕೊಂಡು ಪ್ರೀತಿಯಿಂದ ಮುನ್ನೆಡೆಸುತ್ತಿದ್ದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ಲೀಲಾವತಿ ಆಚಾರ್ಯರವರ ಪಾತ್ರ ಬಲು ದೊಡ್ಡದು ಎಂದು ಹೇಳಿ ಅಗಲಿದ ಲೀಲಾವತಿ ಆಚಾರ್ಯರವರ ಆತ್ಮಕ್ಕೆ ದೇವರು ಸದ್ಗತಿ ಒದಗಿಸಲಿ ಎಂದು ಪ್ರಾರ್ಥಿಸಿದರು.

ಅಗಲಿದ ಲೀಲಾವತಿ ಆಚಾರ್ಯರವರ ಪತಿ ಸುಬ್ರಾಯ ಆಚಾರ್ಯ, ಪುತ್ರಿಯರಾದ ರತ್ನಾವತಿ, ಕವಿತ ಸುಮ, ಪುತ್ರರಾದ
ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಚಂದ್ರ ಆಚಾರ್ಯ, ಗಣೇಶ್ ಆಚಾರ್ಯ, ಅಳಿಯ ವೆಂಕಟೇಶ್, ಸೊಸೆಯಂದಿರಾದ ಆಶಾ, ನಯನ, ಮೊಮ್ನಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೃತರ ಭಾವಚಿತ್ರಕ್ಜೆ ಪುಷ್ಪಾರ್ಚನೆ..
ಈ ಸಂದರ್ಭದಲ್ಲಿ ಕುಟುಂಬಿಕರು ಹಾಗೂ ಗಣ್ಯರು ಅಗಲಿದ ಲೀಲಾವತಿ ಆಚಾರ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು
ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here