ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಷಷ್ಠಿ ಮಹೋತ್ಸವದ ಅಂಗವಾಗಿ ನ.28 ರ ಪಂಚಮಿಯ ದಿನ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ ಸೇವೆಗಳು ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಬೆಳಿಗ್ಗೆ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀರಾಗ್ ಮ್ಯೂಸಿಕ್ ಪುತ್ತೂರು ಇವರಿಂದ `ಪಂಚಮಿ ಸ್ವರಾಂಜಲಿ-2022′ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ರಾತ್ರಿ 7. ಗಂಟೆಗೆ ಮಹಾಪೂಜೆ, ಶ್ರೀದೇವರ ಬಲಿಹೊರಟು ಪಂಚಮಿ ಉತ್ಸವ ಪಲ್ಲಕಿ ಉತ್ಸವ ಕಟ್ಟೆಪೂಜೆ, ರಾತ್ರಿ ಶಿರಾಡಿ ದೈವದ ಕಿರುವಾಳು ಆಗಮನ ನಡೆಯಲಿದೆ.
ನ.29 ಷಷ್ಠಿ ಮಹೋತ್ಸವ:
ಜಾತ್ರೋತ್ಸವದಲ್ಲಿ ನ.29ರ ಷಷ್ಠಿಯಂದು ಬೆಳಿಗ್ಗೆ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು ರಂಗಪೂಜೆ ವೈದಿಕ ಮಂತ್ರಾಕ್ಷತೆ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.