ಕ್ಯಾಂಪ್ಕೊದಿಂದ ಸಹಾಯಧನ ಹಸ್ತಾಂತರ

0

ಪುತ್ತೂರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿಯಲ್ಲಿ ನ.30 ರಂದು ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ತಾಲೂಕು ಕಸಬಾ ಗ್ರಾಮದ ಶಿವಕುಮಾರ್ ಜಿ.ಎಸ್ ರವರು ಆಕಸ್ಮಿಕ ಮರಣ ಹೊಂದಿದ ಕಾರಣ ಅವರ ಪತ್ನಿಯಾದ ಶ್ ದೀಪ .ಟಿ ಅವರಿಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಘವೇಂದ್ರ ಭಟ್, ಕೆದಿಲ ರವರು ₹.50,000/- ಸಹಾಯಧನದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಎಂ.ಜಿ.ಭಟ್, ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕರಾದ  ಜಯರಾಮ ಶೆಟ್ಟಿ, ಕ್ಯಾಂಪ್ಕೊ ಪುತ್ತೂರು ಶಾಖಾಧಿಕಾರಿ  ಅಮರೇಶ ಪಿ, ಕಾರ್ಯನಿರ್ವಾಹಕ ಅಧಿಕಾರಿ  ಉಷಾ ಮತ್ತು ಕ್ಯಾಂಪ್ಕೊ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here